ಸಚಿವ ಎಂ.ಬಿ.ಪಾಟೀಲ 2ನೆ ಲಿಂಗಾಯತ ಧರ್ಮ ಸಂಸ್ಥಾಪಕರು: ಬಸವನ ಗೌಡ ಯತ್ನಾಳ್
Update: 2017-09-19 23:23 IST
ವಿಜಯಪುರ, ಸೆ.19: ಸಚಿವ ಡಾ.ಎಂ.ಬಿ.ಪಾಟೀಲ ಎರಡನೆ ಲಿಂಗಾಯತ ಧರ್ಮ ಸಂಸ್ಥಾಪಕರು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕೇಂದ್ರ ಮಾಜಿ ಸಚಿವ ಬಸಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಬಸವೇಶ್ವರ ವೃತ್ತದ ನವೀಕರಣ ಕಾಮಗಾರಿಗೆ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ ನೀಡಿದರು. ನಂತರ ಇಂಜಿನಿಯರ್, ಸಚಿವರು ಹಾಗೂ ಯತ್ನಾಳ್ ಅವರಿಗೆ ನವೀಕರಣ ಕಾವುಗಾರಿಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯತ್ನಾಳ್, ಸಚಿವ ಡಾ.ಎಂ.ಬಿ.ಪಾಟೀಲ ಎರಡನೆ ಲಿಂಗಾಯತ ಧರ್ಮ ಸಂಸ್ಥಾಪಕರು ಎಂದು ಹೇಳಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಬಿ.ಪಾಟೀಲ, ವೀರಶೈವರೂ ತಮಗೆ ಆತ್ಮೀಯರಾಗಿದ್ದಾರೆ ಎಂದು ಹೇಳಿದರು.