ಏಷ್ಯಾಕಪ್ ಕ್ವಾಲಿಫೈಯರ್: ಭಾರತದ ಸಂಭಾವ್ಯ ಫುಟ್ಬಾಲ್ ತಂಡ ಪ್ರಕಟ

Update: 2017-09-19 19:07 GMT

ಹೊಸದಿಲ್ಲಿ, ಸೆ.19: ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಮಕಾವು ತಂಡದ ವಿರುದ್ಧದ ಎಎಫ್‌ಸಿ ಏಷ್ಯಾಕಪ್ ಕ್ವಾಲಿಫೈಯರ್ ಫುಟ್ಬಾಲ್ ಪಂದ್ಯಕ್ಕೆ 28 ಸದಸ್ಯರನ್ನು ಒಳಗೊಂಡ ಸಂಭಾವ್ಯ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ದೋಹಾದಲ್ಲಿ ನಡೆದ ಎಎಫ್‌ಸಿ ಅಂಡರ್-23 ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿರುವ 11 ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮುಂಬೈನಲ್ಲಿ ಸೆ.28 ರಂದು ಒಟ್ಟಿಗೆ ಸೇರಲಿರುವ ಭಾರತದ ಪುಟ್ಬಾಲ್ ತಂಡದ ಸದಸ್ಯರು ಮರುದಿನ ಅಭ್ಯಾಸ ಆರಂಭಿಸಲಿದ್ದಾರೆ.

   ಸ್ಟೀಫನ್ ಕಾನ್‌ಸ್ಟನ್‌ಟೈನ್ ಕೋಚಿಂಗ್‌ನಲ್ಲಿ ಭಾರತ ಈವರೆಗೆ ಆಡಿರುವ ಎಲ್ಲ ಮೂರು ಅರ್ಹತಾ ಪಂದ್ಯಗಳನ್ನು ಗೆದ್ದುಕೊಂಡಿದ್ದು 3 ಪಂದ್ಯಗಳಲ್ಲಿ 9 ಅಂಕ ಗಳಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಅಕ್ಟೋಬರ್ 11 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಕಾವು ವಿರುದ್ಧ ಪಂದ್ಯವನ್ನು ಜಯಿಸಿದರೆ ಭಾರತ 2019ರಲ್ಲಿ ಯುಎಇನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯಾಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದೆ. ‘‘ಪ್ರತಿಯೊಂದು ಪಂದ್ಯಗಳು ಹೊಸದಾಗಿರುತ್ತದೆ. ಈ ಹಿಂದಿನ ಪಂದ್ಯದ ಫಲಿತಾಂಶ ಇತಿಹಾಸವಾಗಿದೆ. ನಮ್ಮ ಹುಡುಗರ ಜೊತೆ ತರಬೇತಿ ನಡೆಸಲು ಎದುರು ನೋಡುತ್ತಿರುವೆ. 2019ರ ಏಷ್ಯಾಕಪ್‌ನಲ್ಲಿ ಸ್ಥಾನಗಿಟ್ಟಿಸಬೇಕಾದರೆ ಕಠಿಣ ಶ್ರಮಪಡಬೇಕಾದ ಅಗತ್ಯವಿದೆ’’ ಎಂದು ಕೋಚ್ ಕಾನ್‌ಸ್ಟನ್‌ಟೈನ್ ಹೇಳಿದ್ದಾರೆ.

ಭಾರತದ ಸಂಭಾವ್ಯ ಫುಟ್ಬಾಲ್ ತಂಡ

ಗೋಲ್‌ಕೀಪರ್‌ಗಳು: ಸುಬ್ರತಾ ಪಾಲ್, ಗುರುಪ್ರೀತ್ ಸಿಂಗ್, ಅಮರಿಂದರ್ ಸಿಂಗ್, ವಿಶಾಲ್ ಕೈಥ್.

►ಡಿಫೆಂಡರ್‌ಗಳು

ಪ್ರೀತಂ ಕೊಟಾಲ್, ಲಾಲ್‌ರುಥರ, ನಿಶು ಕುಮಾರ್, ಸಂದೇಶ್ ಝಿಂಗಾನ್, ಅನಾಸ್ ಎಡಥೊಡಿಕ, ಸಲಾಮ್ ರಂಜನ್ ಸಿಂಗ್, ಸರ್ಥಕ್ ಗೊಲುಯಿ, ಜೆರ್ರಿ ಲಾಲ್‌ರಿಂಝುಲಾ, ನಾರಾಯಣ್ ದಾಸ್.

►ಮಿಡ್‌ಫೀಲ್ಡರ್‌ಗಳು

ಜಾಕಿಚಂದ್ ಸಿಂಗ್, ಉದಾಂತ್ ಸಿಂಗ್, ನಿಖಿಲ್ ಪೂಜಾರಿ, ಎಜೆನ್ಸನ್ ಲಿಂಗ್ಡಾ, ರೌಲಿನ್ ಬಾರ್ಗೆಸ್, ಮುಹಮ್ಮದ್ ರಫೀಕ್, ಅನಿರುದ್ಧ್ ಥಾಪ, ಗೆರ್ಮನ್‌ಪ್ರೀತ್ ಸಿಂಗ್, ಹಲಿಚರಣ್ ನರ್ಝರಿ.

►ಫಾರ್ವರ್ಡ್ ಗಳು

ಬಲ್ವಂತ್ ಸಿಂಗ್, ಅಲ್ಲೆನ್ ಡೆಯೊರಿ, ಜೆಜೆ ಲಾಲ್‌ಪೆಕ್ಲುವಾ, ಸುನೀಲ್ ಚೆಟ್ರಿ, ಹಿತೇಶ್ ಶರ್ಮ, ಸಿ.ಕೆ. ವಿನೀತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News