ಪ್ರಿಸ್ಟನ್ ವಿವಿಯಲ್ಲಿ ರಾಹುಲ್ ಮೋಡಿ

Update: 2017-09-20 04:40 GMT

ವಾಷಿಂಗ್ಟನ್, ಸೆ. 20: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಿಸ್ಟನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಚೀನಾ ಹಾಗೂ ಭಾರತ ಆಯ್ಕೆ ಮಾಡಿಕೊಂಡಿರುವ ಹಾದಿಗಳು ಭಿನ್ನವಾಗಿದ್ದರೂ, ಈ ಎರಡು ದೇಶಗಳ ಸಾಧನೆ, ವಿಶ್ವವನ್ನು ಮೂಲಭೂತವಾಗಿ ಹೇಗೆ ಪುನರ್ ರೂಪಿಸಬಹುದು ಎನ್ನುವುದಕ್ಕೆ ನಿರ್ಧಾರಕ ಅಂಶಗಳು ಎಂದು ಬಣ್ಣಿಸಿದರು.

ಭಾರತ ಮತ್ತು ಅಮೆರಿಕ ನಡುವೆ ಹಲವು ಸಾಮ್ಯತೆಗಳಿವೆ ಎಂದು ಬಣ್ಣಿಸಿದರು. ಎರಡು ದೊಡ್ಡ ವಲಸೆಗಳು ಜಾಗತಿಕ ಮಟ್ಟದಲ್ಲಿ ಕಾಣಿಸುತ್ತಿವೆ. ಒಂದೂ ಸಂಪೂರ್ಣ ಮುಕ್ತ ಹಾಗೂ ಇನ್ನೊಂದು ಕೇಂದ್ರೀಯವಾಗಿ ನಿಯಂತ್ರಿತ. ವ್ಯವಸ್ಥೆ ಭಿನ್ನವಾಗಿ ಇದಕ್ಕೆ ಸ್ಪಂದಿಸುತ್ತಿದೆ. ಭಾರತ ಹಾಗೂ ಚೀನಾ ಎರಡು ದೈತ್ಯ ಶಕ್ತಿಗಳಾಗಿದ್ದು, ತಮ್ಮ ಕೃಷಿ ಆರ್ಥಿಕತೆಯನ್ನು ಆಧುನಿಕ ನಗರ ಮಾದರಿ ದೇಶಗಳಾಗಿ ಪರಿವರ್ತಿಸುತ್ತಿವೆ, ಇಲ್ಲಿ ವಿಶ್ವ ಜನಸಂಖ್ಯೆಯ ಅತಿದೊಡ್ಡ ಭಾಗವಿದೆ ಎಂದು ಬಣ್ಣಿಸಿದರು.

ಈ ಎರಡು ದೈತ್ಯ ಶಕ್ತಿಗಳ ನಡುವೆ ಸಹಕಾರ ಮತ್ತು ಪೈಪೋಟಿ ಎರಡೂ ಇದೆ ಎಂದು ರಾಹುಲ್ ಹೇಳಿದರು. ಇದರ ಲಾಭ ಪಡೆಯಲು ಹೇಗೆ ನಮ್ಮ ಉದ್ಯೋಗ ಪಡೆಯಬೇಕು ಎನ್ನುವುದನ್ನು ನಾವು ಯೋಚಿಸಬೇಕು. ಚೀನಾ ಜತೆಗೆ ಪೈಪೋಟಿಗೆ ಸಜ್ಜಾಗಬೇಕು ಎಂದು ಹೇಳುವ ಮೂಲಕ ಭಾರತದ ಸಾಧನೆ ಅಷ್ಟೊಂದು ಉತ್ತಮವಾಗಿಲ್ಲ ಎಂದು ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News