ಮೆಕ್ಸಿಕೊ ಭೂಕಂಪ: 226ಕ್ಕೇರಿದ ಸಾವಿನ ಸಂಖ್ಯೆ

Update: 2017-09-20 07:33 GMT

ಮೆಕ್ಸಿಕೊ ಸಿಟಿ, ಸೆ. 20: ಕೇಂದ್ರ ಮೆಕ್ಸಿಕೊದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 226ಕ್ಕೇರಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ.

ಮೆಕ್ಸಿಕೋ ಸಿಟಿಯ ದಕ್ಷಿಣದಲ್ಲಿರುವ ಮೋರ್ಲೋಸ್ ನಲ್ಲಿ 55 ಮಂದಿ, ಇತರ ನೆರೆಯ ಭಾಗಗಳಲ್ಲಿ ಹಲವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟಿದ್ದುಸಾವಿರಾರು ಮಂದಿ ಭೀತಿಯಿಂದ ತಮ್ಮ ಕಟ್ಟಡಗಳಿಂದ ಹೊರಬಂದು ಬೀದಿಯಲ್ಲಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರನ್ನು ಸಂರಕ್ಷಿಸುವ ಪರಿಹಾರ ಕಾರ್ಯ ಮುಂದುವರಿದಿದೆ.

ಮೆಕ್ಸಿಕೊ ಸಿಟಿನಗರದಲ್ಲೇ ಒಟ್ಟು 44 ಕಡೆಗಳಲ್ಲಿ ಕಟ್ಟಡಗಳು ಕುಸಿದಿವೆ ಎಂದು ಮೇಯರ್ ಮೈಗುಲ್ ಅಂಜೆಲ್ ಮನ್ಸೆರಾ ಪ್ರಕಟಿಸಿದ್ದಾರೆ.

1985ರ ಬಳಿಕ ಇದು ಭೀಕರ ಭೂಕಂಪವಾಗಿದ್ದು, 1985ರಲ್ಲಿ ಸಾವಿರಾರು ಜನರನ್ನು ಬಲಿಪಡೆದ ದಿನವೇ ಮತ್ತೆ ಈ ಭೀಕರ ಘಟನೆ ನಡೆದಿದೆ. ದೇಶದ ದಕ್ಷಿಣದಲ್ಲಿ ಎರಡು ವಾರಗಳ ಹಿಂದಷ್ಟೇ ಭೀಕರ ಭೂಕಂಪ ಸಂಭವಿಸಿ, 90ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News