ಭಾರತ ‘ಎ’ ಹಾಕಿ ತಂಡಕ್ಕೆ ವಿಕಾಸ್ ದಹಿಯಾ ನಾಯಕ

Update: 2017-09-20 18:35 GMT

ಹೊಸದಿಲ್ಲಿ, ಸೆ.20: ಪರ್ತ್‌ನಲ್ಲಿ ಸೆ.28 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಹಾಕಿ ಲೀಗ್‌ನಲ್ಲಿ(ಎಎಚ್‌ಎಲ್) 18 ಸದಸ್ಯರುಗಳಿರುವ ಭಾರತ ‘ಎ’ ತಂಡವನ್ನು ಗೋಲ್‌ಕೀಪರ್ ವಿಕಾಸ್ ದಹಿಯಾ ನಾಯಕನಾಗಿ ಮುನ್ನಡೆಸಲಿದ್ದಾರೆ. ಡಿಫೆಂಡರ್ ಅಮಿತ್ ರೋಹಿದಾಸ್ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಗೋಲ್‌ಕೀಪರ್ ಕೃಷ್ಣ ಪಾಠಕ್, ನೀಲಮ್ ಸಂಜೀಪ್, ಗುರಿಂದರ್ ಸಿಂಗ್, ಆನಂದ್ ಲಾಕ್ರ, ಬಲ್ಜಿತ್ ಸಿಂಗ್ ಹಾಗೂ ವಿಕ್ರಮ್‌ಜಿತ್ ಅವರಿದ್ದಾರೆ. ಟೂರ್ನಮೆಂಟ್‌ನಲ್ಲಿ ಹಾಲಿ ಚಾಂಪಿಯನ್ ವಿಕ್ಟೋರಿಯ ಸಹಿತ 10 ತಂಡಗಳು ಭಾಗವಹಿಸಲಿವೆ. ಭಾರತ ಸೆ.29 ರಂದು ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

ಭಾರತ ‘ಎ’ ತಂಡ

►ಗೋಲ್‌ಕೀಪರ್‌ಗಳು: ವಿಕಾಸ್ ದಹಿಯಾ(ನಾಯಕ), ಕೃಷ್ಣ ಬಿ.ಪಾಠಕ್.

►ಡಿಫೆಂಡರ್‌ಗಳು: ಅಮಿತ್ ರೋಹಿದಾಸ್(ಉಪನಾಯಕ), ನೀಲಮ್ ಸಜೀಪ್, ಗುರ್ವಿಂದರ್ ಸಿಂಗ್, ಆನಂದ್ ಲಾಕ್ರಾ, ಬಲ್ಜಿತ್ ಸಿಂಗ್, ವಿಕ್ರಮ್‌ಜಿತ್ ಸಿಂಗ್.

►ಮಿಡ್‌ಫೀಲ್ಡರ್‌ಗಳು: ಹರ್ಜೀತ್ ಸಿಂಗ್, ಆಶೀಷ್ ಕುಮಾರ್, ಹಾರ್ದಿಕ್ ಸಿಂಗ್, ಸಂತಾ ಸಿಂಗ್, ನೀಲಕಂಠ ಶರ್ಮ.

►ಫಾರ್ವರ್ಡ್‌ಗಳು: ಅರ್ಮಾನ್ ಕುರೇಶಿ, ಮುಹಮ್ಮದ್ ಉಮರ್, ಸಿಮ್ರಾನ್‌ಜಿತ್ ಸಿಂಗ್, ಅಫ್ಫಾನ್ ಯೂಸುಫ್, ತಲ್ವಿಂದರ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News