ಸೈಕ್ಲಿಂಗ್: ಡೆಬೊರಾಗೆ 3ನೆ ಬೆಳ್ಳಿ

Update: 2017-09-22 18:46 GMT

ಅಸ್ಗಬಾತ್, ಸೆ.22: ಭಾರತದ ಸೈಕ್ಲಿಸ್ಟ್ ಅಂಡಮಾನ್‌ನ ಮತ್ತು ನಿಕೊಬಾರ್ ದ್ವೀಪದ ಡೆಬೊರಾ ಹೆರಾಲ್ಡ್ ಅವರು 5ನೆ ಆವೃತ್ತಿಯ ಏಷ್ಯನ್ ಇಂಡೋರ್ ಮತ್ತು ಮಾರ್ಷಲ್ ಆರ್ಟ್ಸ್‌ಗೇಮ್ಸ್‌ನಲ್ಲಿ ಬೆಳ್ಳಿ ಪಡೆದಿದ್ದಾರೆ.

    ಸಿಕ್ಸ್ ಲ್ಯಾಪ್ ಕೆರಿನ್ ಇವೆಂಟ್‌ನಲ್ಲಿ ಹಾಂಕಾಂಗ್‌ನ ಲೀ ವಾಯ್ ಸೆಝ್ ಅವರು ಚಿನ್ನ ಮತ್ತು ಡೆಬೊರಾ ಬೆಳ್ಳಿ ಪಡೆದರು. ಡೆಬೊರಾ ಸೆ.20ರಂದು 200 ಮೀಟರ್ ರೇಸ್‌ನಲ್ಲಿ ಮತ್ತು ಗುರುವಾರ ಅಲೆನಾ ರೆಜಿ ಜೊತೆ ಇನ್ನೊಂದು ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದಿದ್ದರು.

 ಇದರೊಂದಿಗೆ ಭಾರತ ಕೂಟದಲ್ಲಿ 5 ಚಿನ್ನ, 6 ಬೆಳ್ಳಿ ಮತ್ತು 5 ಕಂಚು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News