ಚೆನ್ನೈ ಟೆಸ್ಟ್‌ನ ಮರುದಿನ ಶ್ರೀನಿವಾಸನ್‌ರನ್ನು ಭೇಟಿ ಮಾಡಿದ್ದ ಧೋನಿ

Update: 2017-09-22 18:56 GMT

ಚೆನ್ನೈ, ಸೆ.22: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಮರುದಿನ ಇಂಡಿಯಾ ಸಿಮೆಂಟ್ ಲಿಮಿಟೆಡ್(ಐಸಿಎಲ್) ಕಚೇರಿಗೆ ಭೇಟಿ ನೀಡಿದ್ದಾರೆ.

  ಮಹೇಂದ್ರ ಸಿಂಗ್ ಧೋನಿ ಐಸಿಎಲ್‌ನ ಉಪಾಧ್ಯಕ್ಷರಾಗಿದ್ದಾರೆ. ಅವರು ಐಸಿಎಲ್ ಕಚೇರಿಗೆ ಭೇಟಿ ನೀಡಿರುವುದು ಗುಟ್ಟಾಗಿ ಉಳಿದಿಲ್ಲ. ಧೋನಿ ಐಸಿಎಲ್‌ನ ಮುಖ್ಯ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೊಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದೆ.

ಸ್ಪಾಟ್‌ಫಿಕ್ಸಿಂಗ್ ಆರೋಪದಲ್ಲಿ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಹೊರದಬ್ಬಲ್ಪಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ.

 ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ಗೆ ಮರಳಿದರೆ ಮಾಜಿ ನಾಯಕ ಎಂಎಸ್ ಧೋನಿ ಮತ್ತೆ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಈ ಕಾರಣದಿಂದಾಗಿ ಧೋನಿ ಭೇಟಿ ಹೆಚ್ಚಿನ ಮಹತ್ವ ಪಡೆದಿದೆ.

ಧೋನಿ ಐಸಿಎಲ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ಐಸಿಎಲ್ ಮುಖ್ಯಸ್ಥ ಮತ್ತು ಸಿಎಸ್‌ಕೆಯ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.

 ಧೋನಿ ಅವರನ್ನು ಸಿಎಸ್‌ಕೆ ಮರಳಿ ಸೇರಿಸಿಕೊಳ್ಳಲು ಬಯಸುತ್ತದೆ. ಈ ಸಂಬಂಧ ಬಿಸಿಸಿಐ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಎನ್.ಶ್ರೀನಿವಾಸನ್ ಅವರ ಆಪ್ತರಾದ ಕಾಶಿ ವಿಶ್ವನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News