ಜಪಾನ್ ಓಪನ್: ಸೆಮಿಫೆನಲ್‌ನಲ್ಲಿ ಪ್ರಣವ್-ಸಿಕ್ಕಿಗೆ ಸೋಲು

Update: 2017-09-23 18:36 GMT

ಟೋಕಿಯೊ, ಸೆ.23: ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್‌ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಿಶ್ರ ಡಬಲ್ಸ್‌ಸೆಮಿಫೈನಲ್‌ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ ಸೋತು ನಿರ್ಗಮಿಸಿದ್ದಾರೆ.

ಕಳೆದ ವರ್ಷ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ನಲ್ಲಿ ಪ್ರಶಸ್ತಿ ಗೆದ್ದು ಕೊಂಡಿದ್ದ ಪ್ರಣವ್ ಮತ್ತು ಸಿಕ್ಕಿ ರೆಡ್ಡಿ ಅವರು ಸ್ಥಳೀಯ ಜೋಡಿ ಟಕುರೊ ಹೊಕಿ ಮತ್ತು ಸಯಕಾ ಹಿರೋಟಾ ವಿರುದ್ದ 21-14, 15-21, 19-21 ಅಂತರದಲ್ಲಿ ಸೋಲು ಅನುಭವಿಸಿದರು.

 ಒಂದು ಗಂಟೆ ಕಾಲ ನಡೆದ ಹಣಾಹಣಿಯಲ್ಲಿ ಭಾರತದ ಪ್ರಣವ್ ಮತ್ತು ಸಿಕ್ಕಿ ಆರಂಭದಲ್ಲಿ ಮೇಲುಗೈ ಸಾಧಿಸಿದ್ದರು. ಮೊದಲ ಗೇಮ್‌ನಲ್ಲಿ 21-14 ಅಂತರದಲ್ಲಿ ಗೆಲುವು ದಾಖಲಿಸಿದ್ದ ಪ್ರಣವ್ ಮತ್ತು ಸಿಕ್ಕಿ ಅವರಿಗೆ ಎರಡನೆ ಗೇಮ್‌ನಲ್ಲಿ ಟಕುರೊ ಹೊಕಿ ಮತ್ತು ಸಯಕಾ ಹಿರೋಟಾ 21-15 ಅಂತರದಲ್ಲಿ ತಿರುಗೇಟು ನೀಡಿದರು. ಮೂರನೆ ಗೇಮ್‌ನಲ್ಲೂ ಟಕುರೊ ಹೊಕಿ ಮತ್ತು ಸಯಕಾ ಹಿರೋಟಾ 21-19 ಅಂತರದಲ್ಲಿ ಮೇಲುಗೈ ಸಾಧಿಸುವುದರೊಂದಿಗೆ ಪಂದ್ಯವನ್ನು ಗೆದ್ದುಕೊಂಡರು. ಇದರೊಂದಿಗೆ ಜಪಾನ್ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News