ದಕ್ಷಿಣ ಏಷ್ಯಾದಲ್ಲಿ ಭಾರತವು ಭಯೋತ್ಪಾದನೆಯ ತಾಯಿ: ಪಾಕ್ ಆರೋಪ

Update: 2017-09-24 07:28 GMT

ಹೊಸದಿಲ್ಲಿ, ಸೆ.24: ದಕ್ಷಿಣ ಏಷ್ಯಾದಲ್ಲಿ ಭಾರತವು ಭಯೋತ್ಪಾದನೆಯ ತಾಯಿ ಹಾಗು ಮೋದಿ ಆಡಳಿತದಲ್ಲಿ ಫ್ಯಾಶಿಸ್ಟ್ ಮತ್ತು ಜನಾಂಗೀಯ ಸಿದ್ಧಾಂತಗಳನ್ನು ಹರಡಲಾಗುತ್ತಿದೆ ಎಂದು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ತನ್ನ ನೆರೆಯ ದೇಶಗಳ ವಿರುದ್ಧ ನಡೆಯುವ ಭಯೋತ್ಪಾದನೆಗೆ ಭಾರತವು ನೆರವು ನೀಡುತ್ತದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದನ್ನು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಡಾ.ಮಲೀಹಾ ಲೋಧಿ ಉಲ್ಲೇಖಿಸಿದರು.

ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಭಯೋತ್ಪಾದನೆಯ ಪ್ರಮುಖ ರಫ್ತುದಾರ ಎಂಬ ಸುಷ್ಮಾ ಸ್ವರಾಜ್ ರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕೆಲ ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಿದ್ ಖಕಾನ್ ಅಬ್ಬಾಸಿ, ಭಾರತವು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಲ್ಲದೆ, ಕಾಶ್ಮೀರದಲ್ಲಿ ಮಾನಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಭಾರತವು ಐಟಿ, ವೈದ್ಯಕೀಯದಂತಹ ಪ್ರಮುಖ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದರೆ ಪಾಕಿಸ್ತಾನ ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News