ವಿಶ್ವದ ಅತ್ಯಂತ ತೂಕದ ಮಹಿಳೆ ಇಮಾನ್ ಅಹ್ಮದ್ ನಿಧನ

Update: 2017-09-25 16:24 GMT

ಹೊಸದಿಲ್ಲಿ, ಸೆ.25: ಈ ವರ್ಷದ ಆರಂಭದಲ್ಲಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ತೂಕ ಕಳೆದುಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹ್ಮದ್ ಅಬುಧಾಬಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅವರು ತಮ್ಮ 37ನೆ ಹುಟ್ಟುಹಬ್ಬವನ್ನು ಆಚರಿಸಿದ್ದರು.

ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯರು ಈ ಸುದ್ದಿಯನ್ನು ಖಚಿತಪಡಿಸಿದ್ದು, ಹೃದ್ರೋಗ ಹಾಗೂ ಕಿಡ್ನಿಗಳ ವೈಫಲ್ಯವೇ ಅವರ ನಿಧನಕ್ಕೆ ಕಾರಣ ಎಂದು ಮಾಹಿತಿ ನೀಡಿದ್ದಾರೆ.

“ಯುಎಇಗೆ ಅವರು ಆಗಮಿಸಿದ ನಂತರ ಸುಮಾರು 20 ವೈದ್ಯರ ತಂಡ ಇಮಾನ್ ರ ಆರೋಗ್ಯದ ಮೇಲೆ ನಿಗಾ ಇರಿಸಿಕೊಂಡಿತ್ತು” ಎಂದು ಆಸ್ಪತ್ರೆ ಹೇಳಿದೆ.

ಈಜಿಪ್ಟ್ ನ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿರುವ ಇಮಾನ್ ರನ್ನು ಫೆಬ್ರವರಿ ತಿಂಗಳಲ್ಲಿ ಮುಂಬೈಗೆ ಕರೆತರಲಾಗಿತ್ತು. 

ಘಟನಾವಳಿಗಳ ಕಿರು ಪಟ್ಟಿ

2016 ಡಿಸೆಂಬರ್ 6- ‘ಜಗತ್ತಿನ ಅತ್ಯಂತ ಭಾರದ ಮಹಿಳೆ’ಗೆ ನೆರವು ನೀಡುವ ಕೊಡುಗೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್.

2016 ಅಕ್ಟೋಬರ್ 24- 500 ಕೆಜಿ ತೂಗುವ ಇಮಾನ್ ಜಗತ್ತಿನ ಅತ್ಯಂತ ಭಾರದ ಮಹಿಳೆ ಎಂದು ಘೋಷಣೆ.

2017 ಫೆಬ್ರವರಿ 11- 504 ಕೆಜಿ ತೂಕದ ಇಮನ್ ಮುಂಬೈಯ ಸೈಫೀ ಆಸ್ಪತ್ರೆಗೆ ಆಗಮನ.

2017 ಮಾರ್ಚ್ 7- 100 ಕೆಜಿ ಕಳೆದುಕೊಮಡ ಇಮಾನ್. ಈಗ ಅವರ ತೂಕ 404 ಕೆಜಿ.

2017 ಮಾರ್ಚ್ 9- ಮುಂಬೈಯಲ್ಲಿ ಆಕೆಗೆ ಬ್ಯಾರಿಯಾಟ್ರಿಕ್ ಸರ್ಜರಿ. ಅವರ ಹೊಟ್ಟೆಯ 75 ಶೇಕಡ ಕಡಿತ.

2017 ಮಾರ್ಚ್ 18- ಅವರ ತೂಕ 358 ಕೆಜಿಗೆ ಇಳಿದಿದೆ ಎಂದು ವೈದ್ಯರಿಂದ ಘೋಷಣೆ.

2017 ಎಪ್ರಿಲ್ 24- ಸರ್ಜನ್ ಡಾ. ಮುಫಝಲ್ ಲಕ್ಡಾವಾಲಾ ಮತ್ತು ಆಸ್ಪತ್ರೆ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಸಹೋದರಿ ಶೈಮಾ ಸಲೀಮ್‌ರಿಂದ ಆರೋಪ.

2017 ಎಪ್ರಿಲ್ 26- ಇಮಾನ್ ಆರೋಗ್ಯವಾಗಿದ್ದಾರೆ ಎನ್ನುವುದನ್ನು ತೋರಿಸಲು ವೈದ್ಯರಿಂದ ವೀಡಿಯೊ ಬಿಡುಗಡೆ. ಅವರ ಆರೋಗ್ಯ ಹದಗೆಡುತ್ತಿಲ್ಲ ಎಂದು ವಿವರಣೆ.

   2017 ಮೇ 4- ಇಮಾನ್‌ರನ್ನು ಈಜಿಪ್ಟ್‌ಏರ್ ಸರಕು ವಿಮಾನದಲ್ಲಿ ಅಬುಧಾಬಿಗೆ ವರ್ಗಾವಣೆ.

2017 ಮೇ 13- ತನ್ನ ಬಲಗೈಯನ್ನು ಮೇಲೆತ್ತಿದ ಇಮಾನ್.

2017 ಮೇ 28- ಮೂರು ತಿಂಗಳಲ್ಲಿ ಮೊದಲ ಬಾರಿಗೆ ಬಾಯಿಯಿಂದ ಆಹಾರ ತೆಗೆದುಕೊಳ್ಳಲು ಆರಂಭ.

2017 ಜೂನ್ 24- ಎರಡು ಕೈಗಳಿಂದ ಆಹಾರ ಮತ್ತು ಔಷಧಿಗಳನ್ನು ತೆಗೆದುಕೊಳ್ಳಲು ಆರಂಭ. ಸ್ವತಂತ್ರವಾಗಿ ಕುಳಿತುಕೊಳ್ಳಲು ಸಮರ್ಥ.

2017 ಜುಲೈ 24- ಮುಗುಳುನಗೆಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಇಮಾನ್.

2017 ಸೆಪ್ಟಂಬರ್ 11- ಆಸ್ಪತ್ರೆಯಲ್ಲಿ ತನ್ನ 37ನೆ ಹುಟ್ಟುಹಬ್ಬ ಆಚರಿಸಿಕೊಂಡ ಇಮಾನ್.

2017 ಸೆಪ್ಟಂಬರ್ 25- ಹೃದಯ ಕಾಯಿಲೆಗಳು ಮತ್ತು ಕಿಡ್ನಿ ವೈಫಲ್ಯದಿಂದಾಗಿ ಮುಂಜಾನೆ 4:35ಕ್ಕೆ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News