ಅ.3: ಫುಟ್ಬಾಲ್ ಕಾರ್ಯಕ್ರಮಕ್ಕೆ ಡಿಯಾಗೊ ಮರಡೋನಾ ಚಾಲನೆ

Update: 2017-09-25 18:37 GMT

ಕೋಲ್ಕತಾ, ಸೆ.25: ಅರ್ಜೆಂಟೀನದ ಲೆಜೆಂಡ್ ಡಿಯಾಗೊ ಮರಡೋನಾ ಅ.3 ರಂದು ಕೋಲ್ಕತಾದಲ್ಲಿ ಫುಟ್ಬಾಲ್‌ಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಾಲಿ ಹಾಗೂ ಮಾಜಿ ಫುಟ್ಬಾಲ್ ಆಟಗಾರರಾದ ಭೈಚುಂಗ್ ಭುಟಿಯಾ, ಸುನೀಲ್ ಚೆಟ್ರಿ ಹಾಗೂ ಐಎಂ ವಿಜಯನ್ ಭಾಗವಹಿಸಲಿದ್ದಾರೆ. ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗುಲಿ ಫುಟ್ಬಾಲ್ ಮೇಲೆ ತನಗೆ ಹೇಗೆ ಆಸಕ್ತಿ ಮೂಡಿತು ಎಂಬ ಕುರಿತು ಮಾತನಾಡಲಿದ್ದಾರೆ.

ದಿನಪೂರ್ತಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ಕೋಚ್ ಸ್ಟಿಫನ್ ಕಾನ್‌ಸ್ಟನ್‌ಟೈನ್, ಎಟಿಕೆ ಮುಖ್ಯ ಕೋಚ್ ಟೆಡ್ಡಿ ಶೆರಿಂಗ್‌ಹ್ಯಾಮ್, ಜೆಮ್ಶೆಡ್‌ಪುರದ ಎಫ್‌ಸಿ ಮುಖ್ಯ ಕೋಚ್ ಸ್ಟೀವ್ ಕಾಪೆಲ್, ವಿಜಯನ್, ಪಾಲ್ ಅಂಚೆರಿ, ಸುಭಾಸ್ ಭೌಮಿಕ್ ಭಾಗವಹಿಸಲಿದ್ದಾರೆ. ಎರಡನೆ ಬಾರಿ ಕೋಲ್ಕತಾಕ್ಕೆ ಭೇಟಿ ನೀಡಲಿರುವ ಮರಡೋನಾ ಅ.5 ರಂದು ಬರಾಸತ್‌ನ ಆದಿತ್ಯ ಸ್ಕೂಲ್ ಆಫ್ ಸ್ಪೋರ್ಟ್ಸ್ ಅರೆನಾದಲ್ಲಿ ಡಿಯಾಗೊ-ದಾದಾ(ಗಂಗುಲಿ) ತಂಡಗಳ ನಡುವೆ ನಡೆಯಲಿರುವ ಮ್ಯಾಚ್ ಫಾರ್ ಯುನಿಟಿ ಪಂದ್ಯದಲ್ಲಿ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News