ಏಷ್ಯನ್ ಇಂಡೋರ್ ಗೇಮ್ಸ್: ಕುಸ್ತಿಪಟು ಬಜರಂಗ್‌ಗೆ ಚಿನ್ನ

Update: 2017-09-25 18:43 GMT

ಹೊಸದಿಲ್ಲಿ, ಸೆ.25: ಐದನೆ ಆವೃತ್ತಿಯ ಏಷ್ಯನ್ ಇಂಡೋರ್ ಹಾಗೂ ಮಾರ್ಷಲ್ ಆರ್ಟ್ಸ್ ಗೇಮ್ಸ್‌ನಲ್ಲಿ ಭಾರತ ಒಂದು ಚಿನ್ನ ಸಹಿತ ಒಟ್ಟು ನಾಲ್ಕು ಪದಕಗಳನ್ನು ಜಯಿಸಿದೆ. ಹಾಲಿ ಏಷ್ಯಾ ಚಾಂಪಿಯನ್ ಬಜರಂಗ್ ಪುರುಷರ ಫ್ರೀಸ್ಟೈಲ್ 65 ಕೆ.ಜಿ. ತೂಕ ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ಡೈಚಿ ತಕಟಾನಿ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಇಬ್ಬರು ಮಹಿಳಾ ಕುಸ್ತಿಪಟುಗಳಾದ ಶೀತಲ್ ಥೋಮರ್ ಹಾಗೂ ನವಜೋತ್ ಕೌರ್ ತಲಾ ಒಂದು ಕಂಚು ಜಯಿಸಿದ್ದಾರೆ. ಶೀತಲ್ ಮಹಿಳೆಯರ 48 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಹಾಗೂ ನವಜೋತ್ 69 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಗೆದ್ದುಕೊಂಡರು.

ಪುರುಷರ ವೈಯಕ್ತಿಕ ಚೆಸ್ ಟೂರ್ನಿಯಲ್ಲಿ ಕೃಷ್ಣನ್ ಶಶಿಕಿರಣ್ ಕಂಚು ಜಯಿಸುವುದರೊಂದಿಗೆ ಭಾರತಕ್ಕೆ ಮೂರನೆ ಕಂಚು ಗೆದ್ದುಕೊಟ್ಟರು.

ಒಟ್ಟು ಆರು ಚಿನ್ನ, ಏಳು ಬೆಳ್ಳಿ ಹಾಗೂ 11 ಕಂಚು ಜಯಿಸಿದ ಭಾರತ ಪದಕ ಪಟ್ಟಿಯಲ್ಲಿ 12ನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News