ದಾರುನ್ನೂರ್ ಬರ್ ದುಬೈ ಶಾಖೆಯ ಮೂರನೇ ವಾರ್ಷಿಕ ಸಭೆ

Update: 2017-09-25 18:55 GMT

ದುಬೈ,ಸೆ.25 : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ  ದಾರುನ್ನೂರ್ ಬರ್ ದುಬೈ ಶಾಖೆಯ 3 ನೇ ವಾರ್ಷಿಕ ಸಭೆಯು  ಇತ್ತೀಚೆಗೆ ಬರ್ ದುಬೈ ಅಲ್ ಫರ್ದಾನ್ ಕಟ್ಟಡದಲ್ಲಿ ಜನಾಬ್ ಯೂಸುಫ್ ಈಶ್ವರಮಂಗಲ ರವರ ಅದ್ಯಕ್ಷತೆಯಲ್ಲಿ ನೆರವೇರಿತು.

ಅವಲೋಕನ ಸಮಿತಿಯ ಪ್ರಮುಖರಾದ ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ, ಜನಾಬ್ ಬದ್ರುದ್ದೀನ್ ಹೆಂತಾರ್, ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ಜನಾಬ್ ಉಸ್ಮಾನ್ ಕೆಮ್ಮಿಂಜೆ, ಜನಾಬ್ ಇಲ್ಯಾಸ್ ಕಡಬ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಶಾಫಿ ಉಸ್ತಾದ್ ಅಜ್ಜಾವರ ರವರ ದುಆದ ಬಳಿಕ ಪ್ರಧಾನ ಕಾರ್ಯದರ್ಶಿ ಜನಾಬ್ ನವಾಝ್ ಕಕ್ಕಿಂಜೆಯವರು ಸ್ವಾಗತಿಸಿದರು.

ಕಾರ್ಯಕ್ರಮವನ್ನು ದಾರುನ್ನೂರ್ ಬರ್ ದುಬೈ ಶಾಖೆಯ ಸದಸ್ಯರೂ , ದಾರುನ್ನೂರ್ ಯು ಎ ಇ  ಸಮಿತಿಯ ಉಪದೇಶಕರೂ ಆಗಿರುವ ಜನಾಬ್ ಅಶ್ರಫ್ ಖಾನ್ ಮಾಂತೂರ್ ರವರು ಉದ್ಘಾಟಿಸಿ ಮಾತನಾಡಿದ ಅವರು ದಾರುನ್ನೂರ್ ಅಲ್ಪಾವಧಿಯಲ್ಲಿ ಹೆಚ್ಚು ಪ್ರಖ್ಯಾತಗೊಳ್ಳಲು ಅದರ ಕೇಂದ್ರ ಸಮಿತಿ ನೇತಾರರ ಮತ್ತು ಯು ಎ ಇ ಕಾರ್ಯಕರ್ತರ ಅರ್ಪಣಾ ಮನೋಭಾವವೇ ಪ್ರಮುಖ  ಸೂತ್ರವಾಗಿರುತ್ತದೆ ಎಂದರು.

ವಾರ್ಷಿಕ ವರದಿ ಮತ್ತು ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ ಜನಾಬ್ ನವಾಝ್ ಕಕ್ಕಿಂಜೆ ನೀಡಿದರು. 
ನಂತರ ಮಾತನಾಡಿದ ಅದ್ಯಕ್ಷರಾದ ಜನಾಬ್ ಯೂಸುಫ್ ಈಶ್ವರಮಂಗಲರವರು ನಡೆಸಿ ಕಳೆದ ಮೂರು ವರ್ಷಗಳಿಂದ ದಾರುನ್ನೂರ್ ಬರ್ ದುಬೈಯಲ್ಲಿ ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿದ್ದು ಅದಕ್ಕೆ ಪ್ರತಿಯೊಬ್ಬ ಸದಸ್ಯನ ಮಾನಸಿಕ ಮತ್ತು ಆರ್ಥಿಕ ಸಹಕಾರವೇ ಮೂಲವಾಗಿರುತ್ತದೆ. ಇನ್ನೂ ಮುಂದೆಯೂ ತಮ್ಮೆಲ್ಲರ ಸಹಕಾರ ಮುಂದುವರಿಸಿ ದಾರುನ್ನೂರನ್ನು ಇನ್ನೂ ಹೆಚ್ಚು ಮೇಲಕ್ಕೆತ್ತಲು ಪ್ರಯತ್ನಿಸಬೇಕೆಂದು ವಿನಂತಿಸಿ ರಚಿಸಲ್ಪಡುವ ನೂತನ ಸಮಿತಿಗೆ ಶುಭ ಹಾರೈಸಿ ಹಾಲಿ ಸಮಿತಿಯನ್ನು ಬರ್ಖಾಸ್ತು ಗೊಳಿಸುವುದಾಗಿ ಘೋಷಿಸಿದರು.ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆಯವರು ವಹಿಸಿಕೊಂಡರು. 

2017-18 ರ ಸಾಲಿನ ನೂತನ ಸಮಿತಿ ವಿವರ

ಗೌರವಾದ್ಯಕ್ಷರು - ಜನಾಬ್ ಯೂಸುಫ್ ಈಶ್ವರಮಂಗಲ 
ಅದ್ಯಕ್ಷರು - ಜನಾಬ್ ಶಾಫಿ ಉಸ್ತಾದ್ ಅಜ್ಜಾವರ 
ಉಪಾದ್ಯಕ್ಷರು - ಜನಾಬ್ ಸಲೀಂ ಕಕ್ಕಿಂಜೆ 

                  - ಜನಾಬ್ ಸಂಶುದ್ದೀನ್ ಅಜ್ಜಾವರ 
ಪ್ರಧಾನ ಕಾರ್ಯದರ್ಶಿ - ಜನಾಬ್ ನವಾಝ್ ಕಕ್ಕಿಂಜೆ 
ಕಾರ್ಯದಶಿಗಳು - ಜನಾಬ್ ಉಮರ್ ಅಜ್ಜಾವರ 
                   - ಜನಾಬ್ ಹಾರಿಸ್ ನಾಟೆಕಲ್ (ಪುಣಚ)

ಕೋಶಾಧಿಕಾರಿ - ಜನಾಬ್ ಹಂಝ ಪುಣಚ 
ಸಂಘಟನಾ ಕಾರ್ಯದರ್ಶಿ - ಜನಾಬ್ ಅಶ್ರಫ್ ಆರ್ತಿಕೆರೆ 
ಕನ್ವೀನರ್ ಗಳು - ಜನಾಬ್ ಅಶ್ರಫ್ ಖಾನ್ ಮಾಂತೂರ್
                    - ಜನಾಬ್ ಝೈನುದ್ದೀನ್ ಮಾಂತೂರ್ 
                    - ಜನಾಬ್ ಅಬ್ದುಲ್ ಸತ್ತಾರ್ ಹೆಂತಾರ್  
ಕಾರ್ಯಕಾರಿ ಸಮಿತಿ ಸದಸ್ಯರು :
ಜನಾಬ್ ಮಹಮ್ಮದ್ ಪೈವಳಿಕೆ , ಜನಾಬ್ ಹಂಝ ಮಲಪ್ಪುರಮ್, ಜನಾಬ್ ಮಹಮ್ಮದ್ ಫಯಾಝ್ ಅಜ್ಜಾವರ, ಜನಾಬ್ ಝುಬೈರ್ ನಾಟೆಕಲ್ (ಪುಣಚ) ಜನಾಬ್ ಅಶ್ರಫ್ ಆತೂರು, ಜನಾಬ್ ಮುಸ್ತಫಾ ಸಾಲ್ಮರ, ಜನಾಬ್ ಇಲ್ಯಾಸ್ ಪುತ್ತೂರು, ಜನಾಬ್ ಅಬ್ದುಲ್ ಖಾದರ್ ಕಾಸರಗೋಡ್, ಜನಾಬ್ ಕಮರುದ್ದೀನ್ ಕಾಸರಗೋಡ್, ಜನಾಬ್ ಶಾಕಿರ್ ಸವಣೂರ್, ಜನಾಬ್ ನಾಸಿರ್ ಸುಳ್ಯ ( ಸುಪ್ರೀಂ) ಜನಾಬ್ ಅಬ್ದುಲ್ ರಹ್ಮಾನ್ ಕಡಬ, ಜನಾಬ್ ಜುನೈದ್ ಬೆಟ್ಟಂಪಾಡಿ, ಜನಾಬ್ ಹಾರಿಸ್ ಬೆಟ್ಟಂಪಾಡಿ, ಜನಾಬ್ ಇಫ್ತಿಕಾರ್ ಬಿ.ಸಿ ರೋಡ್, ಜನಾಬ್ ಮುಸ್ತಫಾ ಕರ್ವೇಲ್, ಜನಾಬ್ ಇರ್ಫಾನ್ ಕಾಸರಗೋಡ್, ಜನಾಬ್ ಉಬೈದುಲ್ಲಾ ಬಜ್ಪೆ ಮೊದಲಾದವರನ್ನು ಆರಿಸಲಾಯಿತು.

ಬದ್ರುದ್ದೀನ್ ಹೆಂತಾರ್ ನೂತನ ಸಮಿತಿಗೆ ಶುಭ ಹಾರೈಸಿದರು.
ನೂತನ ಅದ್ಯಕ್ಷರಾದ ಶಾಫಿ ಉಸ್ತಾದರು ದಾರುನ್ನೂರ್ ಪ್ರತಿಫಲ ಶೇಖರಿಸಲು ಅಲ್ಲಾಹನು ನೀಡಿದ ವರದಾನವಾಗಿದ್ದು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿ ಸಹಕಾರ ಯಾಚಿಸಿ ಮಾತನ್ನು ಮುಕ್ತಾಯಗೊಳಿಸಿದರು. 

ನೂತನ ಸಮಿತಿಗೆ ಶುಭ ಹಾರೈಸಿದ ಸಮಿತಿ ಅದ್ಯಕ್ಷರಾದ ಶಾಫಿ ಉಸ್ತಾದರು ಜನಾಬ್ ಅಶ್ರಫ್ ಅರ್ತಿಕೆರೆ, ಜನಾಬ್ ಹಂಝ ಪುಣಚ, ಜನಾಬ್ ಸಲೀಂ ಕಕ್ಕಿಂಜೆ ಮೊದಲಾದವರು ಸಾಂದರ್ಭಿಕವಾಗಿ  ಮಾತನಾಡಿದರು .  
ಜನಾಬ್ ಸಂಶುದ್ದೀನ್ ಅಜ್ಜಾವರ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News