ಮೂರನೆ ಸುತ್ತು ಜಯಿಸಿದ ಗೌರವ್ ಗಿಲ್

Update: 2017-09-26 18:40 GMT

ಜೈಪುರ, ಸೆ.26: ಎರಡು ಬಾರಿಯ ಎಪಿಆರ್‌ಸಿ ಚಾಂಪಿಯನ್ ಗೌರವ್ ಗಿಲ್ ಎಂಆರ್‌ಎಫ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಶನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಾಬಲ್ಯ ಮೆರೆದಿದ್ದು, ಆರು ಸ್ಪೆಷಲ್ ಸ್ಟೇಜ್‌ಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸುವ ಮೂಲಕ ಮೂರನೆ ಸುತ್ತಿನಲ್ಲಿ ಜಯಶಾಲಿಯಾದರು.

 ಗಿಲ್ ಹಾಗೂ ಅವರ ಜೊತೆಗಾರ ಮೂಸ ಶರೀಫ್ ಮಹೀಂದ್ರ ಅಡ್ವೆಂಚರ್ ತಂಡವನ್ನು ಪ್ರತಿನಿಧಿಸಿದ್ದು, ಅತ್ಯಂತ ವೇಗವಾಗಿ ಗುರಿ ತಲುಪಿ ಚಾಂಪಿಯನ್‌ಶಿಪ್‌ನಲ್ಲಿ ಜಯ ಸಾಧಿಸಿದರು. ನೈಟ್ ಹಾಕ್ ಸ್ಟೇಜ್‌ನಲ್ಲಿ 13:21.1 ನಿಮಿಷದಲ್ಲಿ 13.9 ಕಿ.ಮೀ. ದೂರವನ್ನು ಕ್ರಮಿಸಿದರು.

 ಎರಡನೆ ಸ್ಪೆಷಲ್ ಸ್ಟೇಜ್‌ನಲ್ಲಿ ಗಿಲ್-ಮೂಸ ಜೋಡಿ ಹಿನ್ನಡೆ ಅನುಭವಿಸಿತು. ಹಾಲಿ ನ್ಯಾಶನಲ್ ಚಾಂಪಿಯನ್ ಕರ್ಣ ಕಡೂರ್ ಹಾಗೂ ಅಮಿತ್ರಾಜಿತ್ ಘೋಷ್ ಮುನ್ನಡೆ ಸಾಧಿಸಿದರು. ಕರ್ಣ-ಘೋಷ್ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಮೂರನೆ ಸ್ಪೆಷಲ್ ಸ್ಟೇಜ್‌ನ 13.8 ಕಿ.ಮೀ.ದೂರವನ್ನು 12:09.5 ನಿಮಿಷದಲ್ಲಿ ಕ್ರಮಿಸಿದ ಗಿಲ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಮುನ್ನಡೆ ಪಡೆದರು.

ಗಿಲ್ 4ನೆ ಸ್ಪೆಷಲ್ ಸ್ಟೇಜ್‌ನ್ನು 5:55.4 ನಿಮಿಷದಲ್ಲಿ ಪೂರೈಸಿದರು. ಕರ್ಣ ಹಾಗೂ ಅಮಿತ್ರಾಜಿತ್ ಕೊನೆಯ ತನಕ ವೇಗ ಕಾಯ್ದುಕೊಂಡಿದ್ದರೂ ಇಬ್ಬರು ಹಿನ್ನಡೆ ಕಂಡರು.

ಎಸ್‌ಎಸ್-5ರಲ್ಲಿ ಕರ್ಣರ ಕಾರು ಅಪಘಾತಕ್ಕೀಡಾದ ಕಾರಣ ಅವರು ಸ್ಪರ್ಧೆಯಿಂದ ಹೊರ ನಡೆದರು. ಅಮಿತ್ರಾಜ್ ಕೂಡ ಸಮಸ್ಯೆ ಎದುರಿಸಿದ್ದು ಆರನೆ ಸ್ಥಾನಕ್ಕೆ ಕುಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News