ಭಾರತದಿಂದ ರಫ್ತು ಸ್ಥಗಿತ: ಪಾಕ್ ನಲ್ಲಿ ಟೊಮೆಟೊ ಕಿಲೋವೊಂದಕ್ಕೆ ಬೆಲೆಯೆಷ್ಟು ಗೊತ್ತೇ?

Update: 2017-09-27 10:23 GMT

ಇಸ್ಲಾಮಾಬಾದ್,ಸೆ. 27:  ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಟೊಮೆಟೊ ಸ್ಥಗಿತವಾದ್ದರಿಂದ ಪಾಕಿಸ್ತಾನದಲ್ಲಿ ವಿವಿಧ ಕಡೆಗಳಲ್ಲಿ ಕಳೆದ ದಿವಸ ಟೊಮೆಟೊ ಕಿಲೊ ಒಂದಕ್ಕೆ 300ರೂಪಾಯಿ ದರವಿತ್ತು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿಮಾಡಿವೆ. ಭಾರತದೊಂದಿಗಿನ ಪರಸ್ಪರ ಸಂಬಂಧದಲ್ಲಿ ಅಡಚಣೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪಾಕಿಸ್ತಾನದ ಆಹಾರ ಸಚಿವ ಸಿಕಂದರ್ ಹಯಾತ್ ಹೇಳಿದರು.

ಪಾಕಿಸ್ತಾನದೊಳಗಿನ ಮಾರುಕಟ್ಟೆಯಲ್ಲಿ ಟೊಮೆಟೊ ಅಲಭ್ಯವಾದ ಅವಸ್ಥೆಯಿದೆ.  ಭಾರತದಿಂದ ಪ್ರತಿ ವರ್ಷ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ನಡೆಯುತ್ತಿತ್ತು. ಆದರೆ ಈಗ ಎರಡು ದೇಶಗಳ ನಡುವೆ  ಸಂಘರ್ಷದ ಪರಿಸ್ಥಿತಿ ನಿರ್ಮಾಣವಾದ್ದರಿಂದ ಗಡಿಯಲ್ಲಿ ಕಂಟೈನರ್ ಸಂಚಾರಕ್ಕೆ ನಿಯಂತ್ರಣ ಹೇರಿಲಾಗಿದೆ. ಇದು ರಫ್ತು ಪ್ರಕ್ರಿಯೆಗೆ ಅಡ್ಡಿಯಾಗಿದೆ.

ಸಿಂಧ್ ಪ್ರಾಂತದಿಂದ ಮತ್ತು ಬಲೂಚಿಸ್ತಾನದಿಂದ ಈಗ ಟೊಮೆಟೊ ಈರುಳ್ಳಿ ಪಾಕಿಸ್ತಾನದ ವಿವಿಧ ಮಾರುಕಟ್ಟೆಗೆ ಬರುತ್ತಿವೆ. ಭಾರತದಿಂದ ಸರಕಾರ ಇನ್ನು ತರಕಾರಿ ರಫ್ತುಮಾಡುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.

 ಟೊಮೆಟೊ ಕಿಲೊಗೆ 132 ರಿಂದ 140ರೂಪಾಯಿ ಮಾತ್ರ ಮಾರುಕಟ್ಟೆ ಬೆಲೆಯಾಗಿದೆ ಎಂದು  ಸರಕಾರ ಹೇಳುತ್ತಿದ್ದರೂ ದರ ನಿಯಂತ್ರಣ ಸರಕಾರದಿಂದ ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನದ ಮಾಧ್ಯಮಗಳು  ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News