ಉಮರ್ ಅಕ್ಮಲ್‌ಗೆ ಮೂರು ಪಂದ್ಯದಿಂದ ನಿಷೇಧ, ದಂಡ

Update: 2017-09-27 18:38 GMT

ಕರಾಚಿ, ಸೆ.27: ಮೂರು ಬಾರಿ ಆಟಗಾರರ ನೀತಿ ಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಮೂರು ಪಂದ್ಯಗಳಿಂದ ನಿಷೇಧ ಹಾಗೂ ದಂಡ ಹೇರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ತನಿಖಾ ಸಮಿತಿ ಶಿಫಾರಸು ಮಾಡಿದೆ. ‘‘ಉಮರ್ ಹಾಗೂ ಇತರರನ್ನು ವಿಚಾರಣೆ ನಡೆಸಿದ ಬಳಿಕ ಬ್ಯಾಟ್ಸ್‌ಮನ್ ಮೂರು ಬಾರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ತಪ್ಪಿಗೆ 3 ಪಂದ್ಯದಿಂದ ನಿಷೇಧ ಹಾಗೂ ದಂಡ, ವಿದೇಶಿ ಲೀಗ್‌ನಲ್ಲಿ ಭಾಗವಹಿಸಲು ನೀಡಲಾಗುವ ಎನ್‌ಒಸಿಯನ್ನು ವಶಕ್ಕೆ ಪಡೆಯುವ ಕುರಿತು ಶಿಫಾರಸು ಮಾಡಲಾ ಗಿದೆ. ಶಿಫಾರಸು ಗಳನ್ನು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿಗೆ ಕಳುಹಿಸಿಕೊಡಲಾಗಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’’ಎಂದು ತನಿಖಾ ಸಮಿತಿಯ ನಿರ್ದೇಶಕ ಹರೂನ್ ರಶೀದ್ ಹೇಳಿದ್ದಾರೆ. ಉಮರ್ ಕಳೆದ ತಿಂಗಳು ನ್ಯಾಶನಲ್ ಕ್ರಿಕೆಟ್ ಅಕಾಡಮಿಯಲ್ಲಿ ಪ್ರಾಕ್ಟೀಸ್ ವಿಷಯಕ್ಕೆ ಸಂಬಂಧಿಸಿ ಪಾಕಿಸ್ತಾನದ ಮುಖ್ಯ ಕೋಚ್ ಮಿಕಿ ಅರ್ಥರ್‌ರೊಂದಿಗೆ ವಾಗ್ವಾದ ನಡೆಸಿದ್ದರು. ಕೋಚ್ ಅರ್ಥರ್ ತನ್ನನ್ನು ನಿಂದಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಉಮರ್ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News