ಸೆಹ್ವಾಗ್‌ಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಸಚಿನ್

Update: 2017-09-27 18:47 GMT

ಮುಂಬೈ, ಸೆ.27: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ತನ್ನಲ್ಲಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ವೌಲ್ಯದ ಬಿಎಂಡಬ್ಲು ಕಾರನ್ನು ತನ್ನ ಆತ್ಮೀಯ ಸ್ನೇಹಿತ, ದಿಲ್ಲಿಯ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

  ಸಚಿನ್ ಅವರು ಬಿಎಂಡಬ್ಲು 7 ಸಿರೀಸ್ 730 ಎಲ್‌ಡಿ ಕಾರನ್ನು ಉಡುಗೊರೆಯಾಗಿ ನೀಡಿರುವುದನ್ನು ಸೆಹ್ವಾಗ್ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಸುಮಾರು 1.14 ಕೋಟಿ ರೂ. ವೌಲ್ಯದ ಈ ಕಾರಿನೊಂದಿಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ ಹಾಗೂ ಸಚಿನ್‌ಗೆ ಧನ್ಯವಾದ ಹೇಳಿದ್ದಾರೆ.

ಸಚಿನ್ ಮತ್ತು ಸೆಹ್ವಾಗ್ 2002ರಿಂದ 2012ರ ತನಕ ಭಾರತದ ಕ್ರಿಕೆಟ್ ತಂಡದ ಪರ ಆರಂಭಿಕ ದಾಂಡಿಗರಾಗಿ ಆಡಿದ್ದರು. ಇವರ ಜೊತೆಯಾಟದಲ್ಲಿ 3,919 ರನ್ ದಾಖಲಾಗಿತ್ತು. 2011ರ ವಿಶ್ವಕಪ್‌ನಲ್ಲಿ ಜೊತೆಯಾಗಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News