ಜೂಜಾಟ ಅಡ್ಡೆ ಮೇಲೆ ದಾಳಿ: ಆರು ಮಂದಿ ಬಂಧನ
Update: 2017-09-28 20:13 IST
ಬೆಂಗಳೂರು, ಸೆ.28: ಜೂಜಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿ 51,200 ರೂ. ವಶಕ್ಕೆ ಪಡೆದಿದ್ದಾರೆ.
ನಗರದ ಸಿದ್ದರಾಜು, ಗಿರೀಶ್, ನಿಂಗೇಗೌಡ, ನಂದೀಶ್, ಗಿರೀಶ್ ಮತ್ತು ನಿಂಗೇಗೌಡ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ನಗರದ ಕೊತ್ತನೂರು ಮುಖ್ಯರಸ್ತೆ, ಬಾಲಕಷ್ಣ ಕಾಂಪ್ಲೆಕ್ಸ್, 2ನೆ ಮಹಡಿಯ ಕೊಠಡಿಯಲ್ಲಿ ಆರೋಪಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೊಠಡಿ ಮೇಲೆ ದಾಳಿ ಮಾಡಿ 51,200 ರೂ. ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.