×
Ad

ಅ.2ರಂದು ಸ್ವಚ್ಛತಾ ಅಭಿಯಾನ

Update: 2017-09-28 20:20 IST

ಬೆಂಗಳೂರು, ಸೆ.28: ಯುನೈಟೆಡ್ ಬೆಂಗಳೂರು ಸಂಘಟನೆ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಅ. 2 ರಂದು ಮೆಗಾ ಕ್ಲಿನಥಾನ್ ಸ್ವಚ್ಛತಾ ಅಭಿಯಾನವನ್ನು ನಗರದ 72 ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದೆ.

ಗುರುವಾರ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅನಿರುದ್ಧ ಎಸ್. ದತ್ತಾ ಅವರು, ಅಂದು ಬೆಳಗ್ಗೆ 7 ಗಂಟೆಗೆ ವಾರ್ಡ್‌ಗಳ ಮಹಾನಗರ ಪಾಲಿಕೆ ಸದಸ್ಯರ ಸಮ್ಮುಖದಲ್ಲಿ ಸ್ವಯಂ ಸೇವಕರು, ಸ್ಥಳೀಯ ನಾಗರಿಕರು, ಪೌರ ಕಾರ್ಮಿಕರು ಕಸ ತುಂಬಿರುವ ಸ್ಥಳಗಳನ್ನು ಸ್ವಚ್ಛಗೊಳಿಸುವ ‘ಮೆಗಾ ಕ್ಲಿನಥಾನ್‌‘ ನಡೆಸಲಿದ್ದಾರೆ ಎಂದು ತಿಳಿಸಿದರು.

ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಖ್ಯಾತ ಕಲಾವಿದರು ಸುಂದರ ಚಿತ್ರಗಳನ್ನು ಬಿಡಿಸುತ್ತಾರೆ ಹಾಗೂ ಚಿಕನ್ ಗುನ್ಯ, ಡೆಂಗ್ಯೂ ಜ್ವರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ವಚ್ಛಗೊಳಿಸುವಾಗ ಸ್ವಯಂ ಸೇವಕರಿಗೆ, ನಾಗರಿಕರಿಗೆ ಉತ್ತೇಜನ ನೀಡಲು ಸ್ವರಾಂತಮ್ ವಾದ್ಯಗೋಷ್ಠಿಯವರಿಂದ ವಾದ್ಯಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ವಇಚ್ಛೆಯಿಂದ ಭಾಗವಹಿಸಲು ಇಚ್ಛಿಸುವ ನಾಗರಿಕರು 9986377989 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News