ಅ.2 ರಂದು ಕಾವ್ಯ ಪ್ರತಿರೋಧ ಸಮಾವೇಶ
Update: 2017-09-30 17:52 IST
ಬೆಂಗಳೂರು, ಸೆ.30: ಗೌರಿ ಲಂಕೇಶ್ ಹಂತಕರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ನೇತೃತ್ವದಲ್ಲಿ ಅ.2 ರಂದು ಸಂಜೆ 5 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾವ್ಯ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಮಾವೇಶದಲ್ಲಿ ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಆಶಯ ನುಡಿ ಆಡಲಿದ್ದು, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕೆ.ಷರೀಪಾ, ಎಚ್.ಎಲ್.ಪುಷ್ಪ, ಹೇಮಲತಾ ಮೂರ್ತಿ, ಮುರಳಿ ಮೋಹನ್ ಕಾಟಿ, ಚಾಂದ್ ಪಾಷ, ಬೊಮ್ಮೇಕಲ್ ವೆಂಕಟೇಶ್, ರುಕ್ಮಿಣಿ ನಾಗಣ್ಣನವರ್, ಸುಬ್ಬು ಹೊಲೆಯಾರ್, ಶಂಕರ ಕೆಂಚನೂರು, ಗುರುಪ್ರಸಾದ್ ಕಂಟಲಗೆರೆ ಸೇರಿದಂತೆ ಹಲವು ಕವಿತೆ ವಾಚನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.