×
Ad

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Update: 2017-10-02 20:12 IST

ಬೆಂಗಳೂರು, ಅ.2: ರೈಲಿನ ಹಳಿಗೆ ತಲೆ ಇಟ್ಟು ಹೊರ ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯನ್ನು ಮೇಘಾಲಯದ ಸ್ಯಾಡಿಯೋ ದಿಂಡೊ(18) ಎಂದು ಗುರುತಿಸಲಾಗಿದೆ.

ಆರ್‌ಆರ್ ಇಂಜನಿಯರ್ ಕಾಲೇಜಿನಲ್ಲಿ ಎರಡನೆ ವರ್ಷದ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಚಿಕ್ಕಬಾಣಾವರ ರೈಲ್ವೇ ನಿಲ್ದಾಣದ ಸಮೇಪದ ಸಿಗ್ನಲ್ ಬಳಿ ರೈಲಿನ ಹಳಿಗೆ ತಲೆ ಇಟ್ಟು ಆತ್ಮಹತ್ಯೆಗೆ ಮಾಡಿದ್ದಾನೆ. ಆಹ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವೃದ್ಧ ಮೃತ್ಯು: ಯಶವಂತಪುರ ರೈಲ್ವೆ ನಿಲ್ದಣದ ಪ್ಲಾಟ್‌ಫಾರಂ ನಂ.1ರಲ್ಲಿ ಸುಮಾರು 65 ವರ್ಷದ ಅಪರಿಚಿತ ವೃದ್ಧರೊಬ್ಬರ ಮೃತ ದೇಹ ಪತ್ತೆಯಾಗಿದೆ. ಮೃತ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News