ಗಾಂಧೀಜಿಯವರ ಆಶಯ ಎಲ್ಲಿ ಹೋಯಿತು?

Update: 2017-10-02 18:35 GMT

ಮಾನ್ಯರೆ,

ಮಹಾತ್ಮಾ ಗಾಂಧಿಯವರನ್ನು ಇಡೀ ವಿಶ್ವವೇ ಆರಾಧಿಸುತ್ತದೆ, ಗೌರವಿಸುತ್ತದೆ. ಸತ್ಯ,ಶಾಂತಿ,ಅಹಿಂಸೆ, ಸ್ವಚ್ಛತಾ ಪಾಲನೆಯಂಥ ಸಾತ್ವಿಕ ಅಂಶಗಳನ್ನು ಮೈಗೂಡಿಸಿಕೊಂಡು ದೇಶದಲ್ಲಿನ ಬಡತನ, ಅಸ್ಪೃಶ್ಯತೆ, ಅಸಮಾನತೆ, ಲಿಂಗ ತಾರತಮ್ಯ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡರು. ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಮತ್ತು ಸಹಿಷ್ಣುತೆ ನೆಲೆಸಲು ದೇಶಾದ್ಯಂತ ಆಂದೋಲನಗಳು ಹಮ್ಮಿಕೊಂಡಿದ್ದಲ್ಲದೆ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸಿದವರು ಅವರು. ಗ್ರಾಮ ಸ್ವರಾಜ್ಯವೇ ದೇಶದ ಪ್ರಗತಿ ಎಂದು ಸಾರಿದ ಮಹಾನ್ ಚೇತನ ಮಹಾತ್ಮಾ ಗಾಂಧಿಯವರು.
ಇವರ ತತ್ವಾದರ್ಶಗಳನ್ನು ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಬರಾಕ್ ಒಬಾಮಾ ಸೇರಿದಂತೆ ಜಗತ್ತಿನ ಎಲ್ಲಾ ವಿದ್ವಾಂಸರು, ಚಿಂತಕರು, ಹೋರಾಟಗಾರರು ಪಾಲಿಸುತ್ತಾರೆ, ಗೌರವಿಸುತ್ತಾರೆ. ಆದರೆ ನಮ್ಮ ದೇಶದಲ್ಲಿಯೇ ಇವರ ತತ್ವಾದರ್ಶಗಳು ಕಣ್ಮರೆಯಾಗುತ್ತಿವೆ. ಗಾಂಧಿಯವರು ಕಂಡ ನವ ಭಾರತ ನಿರ್ಮಾಣದ ಕನಸು ದಶಕಗಳೇ ಉರಳಿ ಹೋದರೂ ಇನ್ನೂ ಕನಸಾಗಿಯೇ ಉಳಿದಿರುವುದು ನೋವಿನ ಸಂಗತಿ. ಇನ್ನೂ ದುರಂತವೆಂಬಂತೆ ಭಾರತದಲ್ಲಿ ಗಾಂಧೀಜಿಯವರು ಯಾವುದನ್ನು ನೋಡಬಾರದು, ಯಾವುದನ್ನು ಕೇಳಬಾರದು, ಯಾವುದನ್ನು ಮಾಡಬಾರದು, ಯಾವುದನ್ನು ಆಚರಿಸಬಾರದು ಅಂದುಕೊಂಡಿದ್ದರೋ ಅದರ ತದ್ವಿರುದ್ಧವಾಗಿ ಎಲ್ಲವೂ ನಮ್ಮ ದೇಶದಲ್ಲಿ ಜಾರಿಯಲ್ಲಿರುವುದು ದೇಶದ ದುರ್ಗತಿಯಾಗಿದೆ.
 

Writer - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Similar News