ಕಾರು ಅಪಘಾತ ಪ್ರಕರಣ: ಉದ್ಯಮಿ ಮೊಮ್ಮಗ ವಿಷ್ಣು ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ
ಬೆಂಗಳೂರು, ಅ.3: ಕಾರು ಅಪಘಾತ ಮತ್ತು ಗಾಂಜಾ ಕೇಸಿನಲ್ಲಿ ಸಿಲುಕಿ ಪರಾರಿಯಾಗಿರುವ ಉದ್ಯಮಿ ಆದಿಕೇಶವುಲು ಅವರ ಮೊಮ್ಮಗ ವಿಷ್ಣು ಈಗ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಅ.4ಕ್ಕೆ ಮುಂದೂಡಿಕೆಯಾಗಿದೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಿಷ್ಣು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಅಪಘಾತ ನಡೆದ ಮಾರನೆಯ ದಿನ ನಗರದ ಖಾಸಗಿ ಆಸ್ಪತ್ರೆಯಿಂದ ಪರಾರಿಯಾಗಿರುವ ವಿಷ್ಣುಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಇನ್ನು ಕೋರ್ಟ್‌ನಲ್ಲಿ ವಾದ ಮಂಡಿಸಿದ ವಿಷ್ಣು ಪರ ವಕೀಲ ಹಷ್ಮತ್ ಪಾಷಾ, ಪೊಲೀಸರು ಎಪ್‌ಐಆರ್ ದಾಖಲಿಸಿರುವ ಸೆಕ್ಷನ್‌ಗಳು ಜಾಮೀನು ನೀಡುವಂತಹವುಗಳಾಗಿವೆ. ವಿಷ್ಣುವನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ, ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಣೆ ನೀಡುವಂತೆ ಸರಕಾರಿ ವಕೀಲರಿಗೆ ಸೂಚಿಸಿದ ಕೋರ್ಟ್ ವಿಚಾರಣೆಯನ್ನು ಸೆ.4ಕ್ಕೆ ಮುಂದೂಡಿತು.
ಅಪಘಾತ ನಡೆದ ನಂತರ ವಿಷ್ಣುವನ್ನು ಪೊಲೀಸರು ವಶಕ್ಕೆ ಪಡೆದೇ ಇಲ್ಲ. ಪೊಲೀಸ್ ವಶಕ್ಕೆ ಪಡೆದಿದ್ದರೆ ಈ ಬಗ್ಗೆ ದಾಖಲೆಗಳಲ್ಲಿ ನಮೂದಿಸಬೇಕಿತ್ತು. ಆದರೆ ಸ್ಟೇಷನ್ ಡೈರಿಯಲ್ಲೂ ಆರೋಪಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ. ವಿಷ್ಣು ಆಸ್ಪತ್ರೆಯಿಂದ ಚಿಕಿತ್ಸೆ ಮುಗಿಸಿ ಹೊರಬಂದಿದ್ದಾನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 224ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವುದೇ ಕಾನೂನು ಬಾಹಿರ ಎಂದು ವಿಷ್ಣು ಪರ ವಕೀಲರು ಜಾಮೀನಿನ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸೌತ್ ಎಂಡ್ ವೃತ್ತದ ಬಳಿ ನಡುರಾತ್ರಿ ಪಾರ್ಟಿ ಮುಗಿಸಿ ಬರುತ್ತಿದ್ದ ವಿಷ್ಣು ಕಾರು ಫುಟ್‌ಪಾತ್ ಮೇಲೆ ಹರಿದು ದಾಂಧಲೆ ಎಬ್ಬಿಸಿದ್ದಲ್ಲದೆ, ಆರೋಪಿ ತಲೆಮರೆಸಿಕೊಂಡಿದ್ದ. ಈ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ನ ಕೆಲವು ನಟರ ಹೆಸರು ಕೇಳಿಬಂದಿತ್ತು. ಆದರೆ ಅವರೆಲ್ಲರೂ ಸ್ನೇಹಿತರಷ್ಟೇ ಎಂದು ನಂತರ ಸ್ಪಷ್ಟನೆಯನ್ನೂ ಕೊಡಲಾಯಿತು. ಅಪಘಾತಕ್ಕೀಡಾದ ವಿಷ್ಣು ಕಾರಿನಲ್ಲಿ ಗಾಂಜಾ ಪತ್ತೆಯಾಗಿತ್ತು. ಅಲ್ಲದೆ, ವಿಷ್ಣು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ.
ದೇಶ ಬಿಟ್ಟು ಹೋಗದಂತೆ ವಿಷ್ಣು ಆದಿಕೇಶವುಲುಗೆ ಲುಕ್ ಔಟು ನೋಟಿಸ್:
ಆದಿಕೇಶವುಲು ಮೊಮ್ಮಗ ವಿಷ್ಣು ನಾಪತ್ತೆ ಪ್ರಕರಣ ಬೆಂಗಳೂರು ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ದೇಶ ಬಿಟ್ಟು ಹೋಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಮಧ್ಯೆ ವಿಷ್ಣು ಪ್ರಕರಣವನ್ನು ಅಧಿಕೃತವಾಗಿ ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ. ಸೋಮವಾರ ಪ್ರಕರಣವನ್ನು ಜಯನಗರ ಪೊಲೀಸರು ಸಿಸಿಬಿಗೆ ಹಸ್ತಾಂತರ ಮಾಡಿದ್ದಾರೆ. ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರ ಒಂದು ತಂಡ ತಿರುಪತಿಗೆ ದೌಡಾಯಿಸಿದ್ದಾರೆ. ವಿಷ್ಣು ತಾಯಿ, ತಮ್ಮ ತಿರುಪತಿಯಲ್ಲಿರುವ ಹಿನ್ನೆಲೆ, ಆರೋಪಿಗಳು ತಿರುಪತಿಯಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿಂದ ಸಿಸಿಬಿ ಪೊಲೀಸರು ತಿರುಪತಿಗೆ ತೆರಳಿದ್ದಾರೆ.
ದೇಶ ಬಿಟ್ಟು ಹೋಗದಂತೆ ವಿಷ್ಣು ಆದಿಕೇಶವುಲುಗೆ ಲುಕ್ ಔಟು ನೋಟಿಸ್ ಬೆಂಗಳೂರು, ಅ.3: ಆದಿಕೇಶವುಲು ಮೊಮ್ಮಗ ವಿಷ್ಣು ನಾಪತ್ತೆ ಪ್ರಕರಣ ಬೆಂಗಳೂರು ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲೂ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ದೇಶ ಬಿಟ್ಟು ಹೋಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ವಿಷ್ಣು ಪ್ರಕರಣವನ್ನು ಅಧಿಕೃತವಾಗಿ ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ. ಸೋಮವಾರ ಪ್ರಕರಣವನ್ನು ಜಯನಗರ ಪೊಲೀಸರು ಸಿಸಿಬಿಗೆ ಹಸ್ತಾಂತರ ಮಾಡಿದ್ದಾರೆ. ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರ ಒಂದು ತಂಡ ತಿರುಪತಿಗೆ ದೌಡಾಯಿಸಿದ್ದಾರೆ. ವಿಷ್ಣು ತಾಯಿ, ತಮ್ಮ ತಿರುಪತಿಯಲ್ಲಿರುವ ಹಿನ್ನೆಲೆ, ಆರೋಪಿಗಳು ತಿರುಪತಿಯಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿಂದ ಸಿಸಿಬಿ ಪೊಲೀಸರು ತಿರುಪತಿಗೆ ತೆರಳಿದ್ದಾರೆ.