ಶೌಚಾಲಯ ನಿರ್ವಹಣೆಯ ಬಗ್ಗೆಯೂ ಗಮನ ನೀಡಿ

Update: 2017-10-03 18:36 GMT

ಮಾನ್ಯರೆ,

ಸ್ವಚ್ಛ ಸಮಾಜದಿಂದ ಸ್ವಚ್ಛ ದೇಶವನ್ನು ಕಟ್ಟಲು ಸಾಧ್ಯ. ಪರಿಸರ ಕಲುಷಿತಗೊಂಡರೆ ಅಲ್ಲಿ ಬದುಕುವಂತಹ ಜನಸಾಮಾನ್ಯರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಜನರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯಗಳು ರಾಜ್ಯದೆಲ್ಲೆಡೆ ನಿರ್ಮಿತಗೊಂಡಿವೆ. ಆದರೆ ಇವುಗಳ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗುತ್ತಿರುವುದು ವಿಷಾದಕರ. ರಾಜ್ಯದ ಹೆಚ್ಚಿನ ಇಂತಹ ಶೌಚಾಲಯಗಳು ಸರಿಯಾದ ನೀರಿನ ವ್ಯವಸ್ಥೆ ಇಲ್ಲದಿರುವುದಿಂದ ಸುತ್ತಮುತ್ತ ಗಬ್ಬುವಾಸನೆ ಹರಡಿಕೊಂಡಿರುತ್ತವೆ. ಈ ಕಟ್ಟಡಗಳ ಒಳಗೆ ಹೋಗುವುದು ಬಿಡಿ, ದೂರದಿಂದ ಸಂಚರಿಸುವಾಗಲೇ ದುರ್ನಾತ ಮೂಗಿಗೆ ಅಡರುತ್ತದೆ.

ಕೆಲವೆಡೆ ಇಂತಹ ಶೌಚಾಲಯಗಳಿಂದ ಸೋರಿಕೆಯಾಗುವ ತ್ಯಾಜ್ಯವು ಸಾರ್ವಜನಿಕರು ಚಲಿಸುವ ರಸ್ತೆಯುದ್ದಕ್ಕೂ ಹರಡುತ್ತಿದ್ದು, ರೋಗ ರುಜಿನಗಳು ಹರಡುವುದಲ್ಲದೆ, ಮಹಿಳೆಯರು ಇಂತಹ ದಾರಿಯಲ್ಲಿ ನಡೆಯುತ್ತಿರುವಾಗ ಮುಜುಗರಕ್ಕೆ ಒಳಗಾಗುವಂತಹ ಸನ್ನಿವೇಶವು ಉಂಟಾಗುತ್ತದೆ. ಆದ್ದರಿಂದ ಶೌಚಾಲಯ ನಿರ್ಮಾಣದತ್ತ ಆಸಕ್ತಿ ತೋರಿಸುವ ಸರಕಾರಗಳು ಅದರ ಸರಿಯಾದ ನಿರ್ವಹಣೆಯ ಬಗ್ಗೆಯೂ ಗಮನ ನೀಡಿ, ಸ್ಥಳೀಯಾಡಳಿತಗಳು ಈ ನಿಟ್ಟಿನಲ್ಲಿ ಕಾರ್ಯಾಚರಿಸುವಂತೆ ನಿರ್ದೇಶನ ನೀಡಬೇಕು. ಇದನ್ನು ಬಳಸುವ ಸಾರ್ವಜನಿಕರು ಕೂಡಾ ನೈರ್ಮಲ್ಯಕ್ಕೆ ಆದ್ಯತೆ ನೀಡಿ ನಗರಗಳ ಸ್ವಚ್ಛತೆಗೆ ತಾವೂ ಕೈಜೋಡಿಸಬೇಕಾಗಿದೆ.

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News