ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತಶಾಸ್ತ್ರ ವಿಭಾಗದ ಸಂಶೋಧನಾ ಪ್ರಬಂಧದ ಸಹಲೇಖಕರಲ್ಲಿ 37 ಭಾರತೀಯರು

Update: 2017-10-04 10:03 GMT

ಪುಣೆ, ಅ.4: ಗುರುತ್ವಾಕರ್ಷಕ ತರಂಗಗಳ ಕುರಿತಾದ ಸಂಶೋಧನೆಗಾಗಿ ಮೂವರು ಅಮೆರಿಕನ್ ವಿಜ್ಞಾನಿಗಳಿಗೆ ಈ ಬಾರಿಯ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದ್ದರೆ ಈ ಸಂಶೋಧನಾ ಪ್ರಬಂಧದ ಸಹ ಲೇಖಕರಾಗಿ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಎಸ್ಟ್ರಾನಮಿ ಆ್ಯಂಡ್ ಎಸ್ಟ್ರೋಫಿಸಿಕ್ಸ್ ಸೇರಿದಂತೆ ಒಟ್ಟು ಒಂಬತ್ತು ಸಂಸ್ಥೆಗಳ 37 ಭಾರತೀಯ ವಿಜ್ಞಾನಿಗಳು ಸಹ ಲೇಖಕರಾಗಿದ್ದಾರೆ.

ಈ ಪ್ರಶಸ್ತಿಗಾಗಿ ಅಮೆರಿಕನ್ ವಿಜ್ಞಾನಿಗಳಾದ ರೈನರ್ ವೀಸ್ಸ್, ಬೆರ್ರಿ ಸಿ ಬೆರಿಷ್ ಹಾಗೂ ಕಿಪ್ ಎಸ್ ಥೋರ್ನ್ ಆಯ್ಕೆಯಾಗಿದ್ದರೆ, ಈ ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನಿಗಳೂ ಮಹತ್ವದ ಪಾತ್ರ ವಹಿಸಿದ್ದಾರೆಂದು ಭಾರತದಲ್ಲಿ ಗುರುತ್ವಾಕರ್ಷಕ ತರಂಗಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿರುವ ಖಗೋಳಶಾಸ್ತ್ರಜ್ಞರಾಗಿರುವ ಸಂಜೀವ್ ಧುರಂಧರ್ ಹೇಳುತ್ತಾರೆ. ಈ ನೊಬೆಲ್ ಪ್ರಶಸ್ತಿ ಲಿಗೊ ಇಂಡಿಯನ್ ಯೋಜನೆಗೂ ಉತ್ತೇಜನಕಾರಿಯಾಗಲಿದೆಯೆಂದು ವಿಜ್ಞಾನಿಗಳು ಆಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News