ಅಸ್ಸಾಂ: 24 ಗಂಟೆಗಳಲ್ಲಿ 8 ನವಜಾತ ಶಿಶುಗಳು ಮೃತ್ಯು

Update: 2017-10-05 16:45 GMT

ಹೊಸದಿಲ್ಲಿ, ಅ.5: ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಕಳೆದ 24 ಗಂಟೆಗಳಲ್ಲಿ 8 ನವಜಾತ ಶಿಶುಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ. 2ರಿಂದ 4 ದಿನಗಳೊಳಗಿನ 5 ಶಿಶುಗಳು ಬುಧವಾರ ರಾತ್ರಿ ಹಾಗು ಮೂರು ಶಿಶುಗಳು ಗುರುವಾರ ಮೃತಪಟ್ಟಿದೆ ಎನ್ನಲಾಗಿದೆ.

ಆದರೆ ವೈದ್ಯರ ನಿರ್ಲಕ್ಷದಿಂದ ಮಕ್ಕಳು ಸಾವನ್ನಪ್ಪಿಲ್ಲ. ಕಡಿಮೆ ತೂಕ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಹೇಳಿದೆ.

“ಕಡಿಮೆ ಜನನ ತೂಕವು ಮಕ್ಕಳ ಸಾವಿಗೆ ಮುಖ್ಯ ಕಾರಣ. ಹಲವು ಪ್ರಕರಣಗಳಲ್ಲಿ ಪ್ರಸವ ಪೂರ್ವ ಆರೈಕೆಯಲ್ಲಿ ಕೊರತೆಯಿರುತ್ತದೆ. ಹೀಗಾಗಿ ಕಡಿಮೆ ತೂಕದೊಂದಿಗೆ ಮಗು ಜನಿಸುತ್ತದೆ. ಮಕ್ಕಳ ಸಾವಿನ ಹಿಂದೆ ಆಸ್ಪತ್ರೆಯ ಯಾವುದೇ ಲೋಪವಿಲ್ಲ” ಎಂದು ಆಸ್ಪತ್ರೆಯ ಡಾ. ದಿಲೀಪ್ ಕುಮಾರ್ ಹೇಳಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಹಿಮಾಂತ ಶರ್ಮಾ ಕೂಡ ಆಸ್ಪತ್ರೆಯ ಕಡೆಯಿಂದ ಯಾವುದೇ ತಪ್ಪು ಸಂಭವಿಸಿಲ್ಲ. ಕಡಿಮೆ ಜನನ ತೂಕದಿಂದಾಗಿಯೇ ಹೆಚ್ಚಿನ ಶಿಶುಗಳು ಮೃತಪಟ್ಟಿವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News