ಅರಳೂರು ಕೆರೆಯಲ್ಲಿ ಮೀನುಗಳ ಮಾರಣಹೋಮ
Update: 2017-10-07 20:54 IST
ಬೆಂಗಳೂರು, ಅ.7: ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಮಳೆ ನೀರಿನ ಜೊತೆ ಕಾರ್ಖಾನೆಗಳ ಹಾಗೂ ಒಳಚರಂಡಿ ನೀರು ಕೆರೆಗೆ ಸೇರಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಬೆಳ್ಳಂದೂರು ಸಮೀಪದ ಅರಳೂರು ಕೆರೆಯಲ್ಲಿ ನಡೆದಿದೆ.
ಶ್ರೀನಿವಾಸ್ ಎಂಬವರು ಕೆರೆಯನ್ನು ಗುತ್ತಿಗೆ ಪಡೆದು ಮೀನುಗಳ ಸಾಕಾಣಿಕೆ ಮಾಡುತ್ತಿದ್ದರು. ಬಿಬಿಎಂಪಿ ಒಳಚರಂಡಿ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ಮಿನುಗಳ ಸಾವಿನಿಂದ ಗುತ್ತಿಗೆದಾರನಿಗೆ ಲಕ್ಷಾಂತರ ರೂ.ನಷ್ಟ ಉಂಟಾಗಿದ್ದು, ಕಾರ್ಖಾನೆಗಳ ನೀರು ಕೆರೆಗಳಿಗೆ ಸೇರುವುದು ಇನ್ನು ನಿಂತಿಲ್ಲವಾದ್ದರಿಂದ ದಿನೆ ದಿನೆ ಮೀನುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.