ಭಾರತೀಯ ವಾಯುಪಡೆ ಅಸ್ತಿತ್ವಕ್ಕೆ

Update: 2017-10-07 18:50 GMT

* 1932: ಭಾರತೀಯ ವಾಯುಪಡೆಯು ಅ.8ರ ಈ ದಿನ ಅಸ್ತಿತ್ವಕ್ಕೆ ಬಂದಿತು. 1945-1950ರ ಅವಧಿಯಲ್ಲಿ ಇದನ್ನು ರಾಯಲ್ ಇಂಡಿಯನ್ ಏರ್‌ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಭಾರತ ಗಣರಾಜ್ಯವಾದ ಬಳಿಕ ರಾಯಲ್ ಎಂಬ ಪದವನ್ನು ಬಿಟ್ಟು ಕೇವಲ ಇಂಡಿಯನ್ ಏರ್‌ಪೋರ್ಸ್ ಎಂದು ಹೆಸರಿಸಲಾಯಿತು. ಭಾರತೀಯ ಭೂಸೇನೆ, ನೌಕಾಸೇನೆಗಳ ಸಹಕಾರದೊಂದಿಗೆ ಭಾರತದ ಗಡಿಪ್ರದೇಶವನ್ನು ಅನ್ಯದೇಶಗಳ ಆಕ್ರಮಣಗಳಿಂದ ರಕ್ಷಿಸುವುದು ವಾಯುಸೇನೆಯ ಪ್ರಮುಖ ಕಾರ್ಯವಾಗಿದೆ. ಮಹಾಪ್ರವಾಹದಂತಹ ವಿಪತ್ತುಗಳ ಸಂದರ್ಭದಲ್ಲಿಯೂ ಇದು ಪರಿಹಾರ ಕಾರ್ಯವನ್ನು ಕೈಗೊಳ್ಳಲು ನೆರವಾಗುತ್ತದೆ.

* 1915: ವಿಶ್ವ ಪ್ರಥಮ ಮಹಾಯುದ್ಧದಲ್ಲಿ ಬ್ರಿಟಿಷ್ ಹಾಗೂ ಜರ್ಮನ್ ಸೈನ್ಯಗಳ ನಡುವೆ ನಡೆದ ‘ಲೂಸ್ ಕದನ’ವು ಈ ದಿನ ಕೊನೆಗೊಂಡಿತು. ಎರಡೂ ಸೈನ್ಯಗಳ ಸುಮಾರು 85,000 ಸೈನಿಕರು ಸಾವಿಗೀಡಾದರು.

* 1961: ಅಮೆರಿಕದ ವಿಮಾನವೊಂದು ರಿಚಮಂಡ್ ವರ್ಜೀನಿಯಾ ಪ್ರದೇಶದಲ್ಲಿ ಪತನಗೊಂಡ ಪರಿಣಾಮ 74ಜನ ಮೃತರಾದರು.

* 1967: ಕ್ರಾಂತಿಕಾರಿ ನಾಯಕ ಅರ್ಜೆಂಟೀನಾದ ಚೆಗುವೆರಾ ಮತ್ತು ಅವರ ಸಹಚರರು ಬೊಲಿವಿಯಾದಲ್ಲಿ ಬಂಧಿಸಲ್ಪಟ್ಟರು.

* 2005: ಪಾಕಿಸ್ತಾನದ ಭೂಪ್ರದೇಶ ಸ್ವತಂತ್ರ ಕಾಶ್ಮೆರದಲ್ಲಿ 7.6 ಕಂಪನಾಂಕದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸಾವಿರಾರು ಜನ ಬಲಿಯಾಗಿ, ಲಕ್ಷಾಂತರ ಜನ ನಿರಾಶ್ರಿತರಾದರು. ಮುಝಪ್ಫರಾಬಾದ್ ನಗರ ಸಮೀಪ ಈ ಭೂಕಂಪ ಕೇಂದ್ರೀಕೃತವಾಗಿತ್ತು. * 1936: ಖ್ಯಾತ ಹಿಂದಿ ಸಾಹಿತಿ, ನಾಟಕಕಾರ ಮುನ್ಶಿ ಪ್ರೇಮ್‌ಚಂದ್ ಈ ದಿನ ನಿಧನರಾದರು.

* 1979: ಸಮಾಜವಾದಿ ನಾಯಕ, ಹೋರಾಟಗಾರ, ರಾಜಕಾರಣಿ ಜಯಪ್ರಕಾಶ್ ನಾರಾಯಣ್ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ