×
Ad

‘ಹೃದಯ ಕವಾಟ ಜೋಡಣೆ ಯಶಸ್ವಿ’

Update: 2017-10-08 20:27 IST

ಬೆಂಗಳೂರು, ಅ. 8: ಹಳೆಯ ಮತ್ತು ಹಾನಿಗೊಳಗಾದ ಹೃದಯ ಕವಾಟವನ್ನು ಹೊರತೆಗೆಯದೆ ಹೊಸ ಕವಾಟವನ್ನು ಹೆಚ್ಚು ರಕ್ತಸ್ರಾವವಿಲ್ಲದೆ ಹೃದಯ ಶಸ್ತ್ರ ಚಿಕಿತ್ಸೆಗೆ ಪರ್ಯಾಯವಾಗಿ ಟಿಎವಿಐ ಮೂಲಕ ಜೋಡಿಸುವಲ್ಲಿ ಬಿಜಿಎಸ್ ಗ್ಲೆನ್‌ಈಗಲ್ಸ್ ಗ್ಲೋಬಲ್ ಆಸ್ಪತ್ರೆ ಯಶಸ್ವಿಯಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯ ಡಾ.ಡಿ.ಆರ್. ರವೀಂದ್ರನಾಥ ರೆಡ್ಡಿ, ಈ ಶಸ್ತ್ರಚಿಕಿತ್ಸೆಗೆ 2011ರಲ್ಲಿ ಎಫ್‌ಡಿಎ ಅನುಮತಿ ನೀಡಿತ್ತು. ಅಂದಿನಿಂದ ಇಂದಿನವರೆಗೆ ವಿಶ್ವದಲ್ಲಿ 50 ಸಾವಿರಕ್ಕೂ ಅಧಿಕ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.

ಇದು ಆಂಜಿಯೋಪ್ಲಾಸ್ಟಿಗೆ ಪರ್ಯಾಯವಾಗಿದೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಮರ್ಥಲ್ಲದ ರೋಗಿಗಳಿಗೆ ಈ ಚಿಕಿತ್ಸೆ ಪೂರಕ. ಮಹಾಪಧಮನಿಯ ಕವಾಟ ಚಿಕ್ಕದಾಗುವಿಕೆಯಿಂದ ಸಮಸ್ಯೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಚಿಕಿತ್ಸಾ ವಿಧಾನವನ್ನು ಬಳಸುವುದು ಸೂಕ್ತ ಎಂದರು.

ಈ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ಹೆಚ್ಚು ನೋವಾಗುವಂತಹ ಪ್ರಕ್ರಿಯೆ ಇರುವುದಿಲ್ಲ. ಟಿಎವಿಐ ವಿಧಾನದಲ್ಲಿ ರೋಗಿಗಳಿಗೆ ಸಾಮಾನ್ಯ ಅನೆಸ್ತೇಶಿಯಾ ಅಥವಾ ಕೃತಕ ಉಸಿರಾಟದ ವ್ಯವಸ್ಥೆಯ ಅಗತ್ಯವಿರುವುದಿಲ್ಲ. ಸರಳವಾಗಿ ನಡೆಸಲಾಗುವ ಈ ಚಿಕಿತ್ಸೆಯಿಂದಾಗಿ ರೋಗಿ ಹೆಚ್ಚು ದಿನ ಆಸ್ಪತ್ರೆಯಲ್ಲಿ ಇರುವ ಅಗತ್ಯವೂ ಇರುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ವೈದ್ಯ ಡಾ.ದೀಪೇಶ್ ವೆಂಕಟರಾಮನ್, ಆಸ್ಪತ್ರೆಯ ಸಿಇಓ ಥಾಮಸ್ ಮ್ಯಾಥ್ಯೂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News