ಆ್ಯಂಬುಲೆನ್ಸ್‌ಗೆ ದಾರಿಬಿಟ್ಟುಕೊಡಿ

Update: 2017-10-08 18:39 GMT

ಮಾನ್ಯರೆ,

ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿರುತ್ತದೆ. ಸಂಚಾರದ ವೇಳೆ ಹಿಂದಿನಿಂದ ಆ್ಯಂಬುಲೆನ್ಸ್ ಬರುವುದನ್ನು ಕಂಡರೆ ವಾಹನ ಸವಾರರು ಅದಕ್ಕೆ ದಾರಿ ಬಿಟ್ಟುಕೊಟ್ಟು, ಅತೀ ಶೀಘ್ರವಾಗಿ ಆಸ್ಪತ್ರೆಗೆ ತಲುಪುವಂತೆ ಅನುವು ಮಾಡಿಕೊಡಬೇಕು ಎಂಬ ನಿಯಮವಿದೆ. ಒಂದು ವೇಳೆ ಈ ಸಂದರ್ಭದಲ್ಲಿ ತಮ್ಮ ಮುಂದೆ ಕೆಂಪು ಸಿಗ್ನಲ್ ಇದ್ದರೂ ಅದನ್ನು ಮುರಿದು ಮುಂದೆ ಸಾಗಬಹುದು ಎಂಬ ಕಾನೂನಿದ್ದರೂ ನಮ್ಮಲ್ಲಿ ಅನೇಕರು, ತಮಗೆ ಎಲ್ಲಿ ಸಿಗ್ನಲ್ ಜಂಪ್ ಮಾಡಿದ ಕೇಸ್‌ನಡಿ ದಂಡ ಪಾವತಿಸಬೇಕಾಗಬಹುದೋ ಎಂಬ ಭಯದಿಂದ ಆ್ಯಂಬುಲೆನ್ಸ್ ಕರೆ ಕೇಳಿಸುತ್ತಿದ್ದರೂ ತಮ್ಮ ಜಾಗವನ್ನು ಬಿಟ್ಟು ಮುಂದೆ ಸಾಗುವುದಿಲ್ಲ. ಆ್ಯಂಬುಲೆನ್ಸ್‌ಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲು ಅನುವು ಮಾಡಿಕೊಡದಿದ್ದಾಗ ರೋಗಿಯ ಚಿಕಿತ್ಸೆಯಲ್ಲಿ ವಿಳಂಬವಾಗಿ ಅಮೂಲ್ಯ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಕುರಿತು ಸಂಚಾರಿ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕು.

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News