×
Ad

ನಕಲಿ ನೋಟು ಚಲಾವಣೆಗೆ ಯತ್ನ: ಆರೋಪಿಯ ಬಂಧನ

Update: 2017-10-11 19:39 IST

ಬೆಂಗಳೂರು, ಅ.11: ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ನಂಬಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ 83,500 ರೂ. ನಕಲಿ ನೋಟುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯಲ್ಲಿದ್ದ ಭಾಸ್ಕರ್ ಬಂಧಿತ ಆರೋಪಿ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ನಗರದ ಕಮರ್ಷಿಯಲ್ ಸ್ಟ್ರೀಟ್‌ನ ಮೊದಲಿಯಾರ್ ರಸ್ತೆ ಬದಿಯಲ್ಲಿ ಭಾಸ್ಕರ್, ಬಿಳಿ ಬಣ್ಣದ ಮಾರುತಿ ವ್ಯಾನ್‌ನಲ್ಲಿ ಕುಳಿತು ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ಸಾರ್ವಜನಿಕರನ್ನು ನಂಬಿಸಿ ಚಲಾವಣೆಗೆ ಯತ್ನಿಸುತ್ತಿದ್ದನು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಭಾಸ್ಕರ್‌ನನ್ನು ಬಂಧಿಸಿ 2 ಸಾವಿರ ರೂ. ಮುಖಬೆಲೆಯ 37 ನಕಲಿ ನೋಟುಗಳು, 500 ರೂ. ಮುಖಬೆಲೆಯ 19 ನಕಲಿ ನೋಟುಗಳು ಹಾಗೂ ಮಾರುತಿ ವ್ಯಾನ್‌ನನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News