ಅಂಗಡಿಗೆ ನುಗ್ಗಿ ಪಿಝ್ಝಾ ದೋಚಿದ ಈ ಕಳ್ಳರನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ!.. ಕಾರಣವೇನು ಗೊತ್ತೇ?

Update: 2017-10-12 16:43 GMT

ಅಮೆರಿಕ, ಅ.12: ಅಂಗಡಿಗಳಿಗೆ, ಕಳ್ಳರು, ದರೋಡೆಕೋರರು ನುಗ್ಗಿ ಸೊತ್ತುಗಳನ್ನು ದೋಚುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇಂತಹ ಪ್ರಕರಣಗಳಲ್ಲಿ ಕಳ್ಳರು ಎಷ್ಟೇ ಜಾಣ್ಮೆ ಪ್ರದರ್ಶಿಸಿದರೂ ಒಂದೇ ಒಂದು ತಪ್ಪಿನಿಂದಲೂ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ.

ಆದರೆ ಅಮೆರಿಕದಲ್ಲಿ ನಡೆದ ಕಳವು ಪ್ರಕರಣವೊಂದರಲ್ಲಿ ಕಳ್ಳರು ಅಂಗಡಿಯೊಳಗಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಅವರನ್ನು ಸೆರೆಹಿಡಿಯಲು ಯಾವ ಪೊಲೀಸರಿಗೂ ಸಾಧ್ಯವಿಲ್ಲ. ಏಕೆಂದರೆ ಈ ಕಳ್ಳರು ಬೇರ್ಯಾರೂ ಅಲ್ಲ ಮೂರು ಕರಡಿಗಳು…!

ಹೌದು ಇಂತಹ ಒಂದು ಘಟನೆ ಅಮೆರಿಕದಲ್ಲಿ ನಡೆದಿದೆ. ಅಂಗಡಿಗೆ ನುಗ್ಗಿದ ಮೂರು ಕರಡಿಗಳು ಪಿಝ್ಝಾಗಳನ್ನು ಕದ್ದು ತಿಂದಿದ್ದು, ನಂತರ ಅಲ್ಲಿಂದ ಕಾಲ್ಕಿತ್ತಿವೆ. ಈ ಕಳವಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅಂಗಡಿ ಮಾಲಕರು, “ಒಂದು ವೇಳೆ ಭವಿಷ್ಯದಲ್ಲಿ ನಮ್ಮ ಅಂಗಡಿಯೊಳಕ್ಕೆ ಕರಡಿಗಳು ನುಗ್ಗಿದರೆ ದಯವಿಟ್ಟು ಗುಂಡಿಕ್ಕಬೇಡಿ ಎಂದು ಪೊಲೀಸರಲ್ಲಿ ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News