ಮುಂಬೈ ಸ್ಲಮ್ ಬಾಲಕರ ಸಂತಸದಲ್ಲಿ ಪಾಲ್ಗೊಂಡ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಜುವಾನ್

Update: 2017-10-14 08:04 GMT

ಹೊಸದಿಲ್ಲಿ, ಅ.14: ಮ್ಯಾಂಚೆಸ್ಟರ್ ಯುನೈಟೆಡ್ ನ ಸ್ಟಾರ್ ಆಟಗಾರ ಜುವಾನ್ ಮಟ ಅವರು ಮುಂಬೈಯ ಹಲವಾರು ಸ್ಲಮ್ ನಿವಾಸಿ ಬಾಲಕರನ್ನು ಓಲ್ಡ್ ಟ್ರ್ಯಾಫೋರ್ಡ್ ಗೆ ಆಹ್ವಾನಿಸಿ ಅವರನ್ನು ಖುಷಿ ಪಡಿಸುವ ಮೂಲಕ ಅವರ ಕನಸನ್ನು ನನಸಾಗಿಸಿದ್ದಾರೆ.

ಆಸ್ಕರ್ ಫೌಂಡೇಶನ್ ಭಾಗವಾಗಿರುವ ಜುವಾನ್ ಈ ವರ್ಷದ ಆರಂಭದಲ್ಲಿ ಮುಂಬೈಯ ಕೊಳಚೆಗೇರಿಯೊಂದಕ್ಕೆ ಭೇಟಿ ನೀಡಿದ್ದರು. ಅವಕಾಶ ವಂಚಿತ ಮಕ್ಕಳಿಗೆ ಫುಟ್ಬಾಲ್ ಆಟದ ಮೂಲಕ ನೆರವು ನೀಡುವ ಉದ್ದೇಶದಿಂದ ಅವರು ಭಾರತ ಪ್ರವಾಸ ಕೈಗೊಂಡಿದ್ದರು.

ಸ್ಪೇನಿನ ಈ ಅದ್ಭುತ ಆಟಗಾರ ಗುರುವಾರ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಲವಾರು ಮಕ್ಕಳು ತಮ್ಮನ್ನು ಸುತ್ತುವರಿದಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಮಕ್ಕಳಿಗೆ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿರುವ ಥಿಯೇಟರ್ ಆಫ್ ಡ್ರೀಮ್ಸ್ ಗೆ ಭೇಟಿ ನಿಡುವ ಅಪೂರ್ವ ಅವಕಾಶ ಒದಗಿ ಬಂದಿತ್ತು.

ಜುವಾನ್ ಅವರು ಮಕ್ಕಳನ್ನು ಸ್ಟೇಡಿಯಂಗೆ ಕರೆದುಕೊಂಡು ಹೋದರಲ್ಲದೆ ಅಲ್ಲಿ ತಮ್ಮ ತಂಡದ ಸಹ ಸದಸ್ಯರಾದ ಆಂಡರ್ ಹೆರ್ರೆರಾ ಹಾಗೂ ಮೊರ್ಗಾನ್ ಸ್ಚ್ನೇಡೆರ್ಲಿನ್ ಅವರನ್ನೂ ಮಕ್ಕಳಿಗೆ ಪರಿಚಯಿಸಿ ಡ್ರೆಸ್ಸಿಂಗ್ ರೂಮಿನಲ್ಲಿ ಮಕ್ಕಳ ಜತೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.

ತಮ್ಮ ಮುಂಬೈ ಭೇಟಿ ವೇಳೆ ಅವರು ಫುಟ್ಬಾಲ್ ಮತ್ತು ಜೀವನ ಕೌಶಲ್ಯ ಸಭೆಯೊಂದರಲ್ಲಿಯೂ ಭಾಗವಹಿಸಿದ್ದರು. ಜುವಾನ್ ಜತೆ ಅವರ ಪತ್ನಿ ಎವೆಲಿನಾ ಕಂಪ್ಫ್ ಕೂಡ ಇದ್ದರು. ಜುವಾನ್ ಈ ಸಂದರ್ಭ ಫುಟ್ಬಾಲ್ 3 ಫೆಸ್ಟಿವಲ್ ನಲ್ಲೂ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News