ಟಿಯಾನ್‌ಜಿನ್ ಓಪನ್: ಶರಪೋವಾ ಫೈನಲ್‌ಗೆ

Update: 2017-10-14 14:08 GMT

ಟಿಯಾನ್‌ಜಿನ್(ಚೀನಾ),ಅ.14: ಐದು ಬಾರಿ ಗ್ರಾನ್ ಸ್ಲಾಮ್ ಜಯಿಸಿದ ರಷ್ಯಾದ ಮಾಜಿ ನಂ.1 ಆಟಗಾರ್ತಿ ಮರಿಯಾ ಶರಪೋವಾ ಅವರು ಟಿಯಾನ್‌ಜಿನ್ ಓಪನ್‌ನಲ್ಲಿ ಫೈನಲ್ ತಲುಪಿದ್ದಾರೆ.

ಇಂದು ನಡೆದ ಸೆಮಿಫೈನಲ್‌ನಲ್ಲಿ ಶರಪೋವಾ ಅವರು ಚೀನಾದ ಪೆಂಗ್ ಶುಯಿ ವಿರುದ್ಧ 6-3, 6-1 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದರು.

 30ರ ಹರೆಯದ ಶರಪೋವಾ ಅವರು ಉದ್ದೀಪನಾ ಮದ್ದು ಸೇವಿಸಿರುವ ಕಾರಣಕ್ಕಾಗಿ ನಿಷೇಧದಿಂದ ಹೊರಬಂದ ಬಳಿಕ ಮೊದಲ ಬಾರಿ ಫೈನಲ್ ತಲುಪಿದ್ದಾರೆ.

ಶರಪೋವಾ ಅವರು ಒಂದು ಗಂಟೆ ಮತ್ತು 18 ನಿಮಿಷಗಳ ಹಣಾಹಣಿಯಲ್ಲಿ ಎದುರಾಳಿ ಪೆಂಗ್ ಶುಯಿ ವಿರುದ್ಧ ಜಯ ಸಾಧಿಸಿದರು.

 ಫೈನಲ್‌ನಲ್ಲಿ ಶರಪೋವಾ ಅವರು ಬೆಲಾರಸ್‌ನ ಆರ್ಯನ್ ಸಬೆಲೆಂಕಾ ಅವರನ್ನು ಎದುರಿಸಲಿದ್ದಾರೆ. ಸಬೆಲೆಂಕಾ ಅವರು ಸೆಮಿಫೈನಲ್‌ನಲ್ಲಿ ಸಾರಾ ಇರಾನಿ ಅವರನ್ನು 6-1, 6-3 ಅಂತರದಲ್ಲಿ ಸೋಲಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News