ಜಪಾನ್ ವಿರುದ್ಧ ಡ್ರಾ ಸಾಧಿಸಿದ ಕ್ಯಾಲೆಡೋನಿಯ

Update: 2017-10-14 18:09 GMT

ಕೋಲ್ಕತಾ, ಅ.14: ಚೊಚ್ಚಲ ಅಂಡರ್-17 ವಿಶ್ವಕಪ್ ಪಂದ್ಯವನ್ನಾಡುತ್ತಿರುವ ಕ್ಯಾಲೆಡೋನಿಯ ತಂಡ ಶನಿವಾರ ನಡೆದ ‘ಎಫ್’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಏಷ್ಯಾದ ಬಲಿಷ್ಠ ತಂಡ ಜಪಾನ್ ವಿರುದ್ಧ 1-1 ರಿಂದ ಡ್ರಾ ಸಾಧಿಸಿ ಗಮನ ಸೆಳೆದಿದೆ. ಫಿಫಾ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಅಂಕ ಗಳಿಸಿದೆ.

ಡ್ರಾ ಸಾಧಿಸಿದ ಹೊರತಾಗಿಯೂ ಜಪಾನ್ ತಂಡ ನಾಲ್ಕನೆ ಬಾರಿ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದೆ. 8ನೆ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಜಪಾನ್ 2003ರ ಬಳಿಕ ಮೊದಲ ಬಾರಿ ವಿಶ್ವಕಪ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಹಂತ ತಲುಪಿದೆ. ಜಪಾನ್ ‘ಎಫ್’ ಗುಂಪಿನಲ್ಲಿ 4 ಅಂಕ ಗಳಿಸಿ 2ನೆ ಸ್ಥಾನ ಪಡೆದಿದೆ. ಕೋಲ್ಕತಾದಲ್ಲಿ ಅ.17 ರಂದು ನಡೆಯಲಿರುವ ನಾಕೌಟ್ ಪಂದ್ಯದಲ್ಲಿ ‘ಎಫ್’ ಗುಂಪಿನ ವಿಜೇತ ತಂಡ ಇಂಗ್ಲೆಂಡ್ ಅಥವಾ ಇರಾಕ್ ತಂಡವನ್ನು ಎದುರಿಸಲಿದೆ. ಕೆಟೊ ನಕಮುರ ಮೊದಲಾರ್ಧದ 7ನೆ ನಿಮಿಷದಲ್ಲಿ ಜಪಾನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ನಕಮುರ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ನಾಲ್ಕನೆ ಗೋಲು ಬಾರಿಸಿದರು.

 83ನೆ ನಿಮಿಷದಲ್ಲಿ ಗೋಲು ಬಾರಿಸಿದ ಜೇಕಬ್ ಜೆನೊ ಕ್ಯಾಲೆಡೋನಿಯಾ 1-1 ಪಂದ್ಯ ಡ್ರಾಗೊಳಿಸಲು ಕಾರಣರಾದರು.

ಫ್ರಾನ್ಸ್ ಹಾಗೂ ಹೊಂಡುರಾಸ್ ವಿರುದ್ದ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಕ್ಯಾಲೆಡೊನಿಯಾ ತಂಡ ಜಪಾನ್ ವಿರುದ್ಧ ಪ್ರಬುದ್ಧ ಪ್ರದರ್ಶನ ನೀಡಿತು.

ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿದ್ದ ಕ್ಯಾಲೆಡೋನಿಯ ಇದೀಗ ಟೂರ್ನಿಯಲ್ಲಿ 2ನೆ ಗೋಲು ಬಾರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News