ವ್ಯಾಟಿಕನ್: 35 ಮಂದಿಗೆ ಸಂತ ಪದವಿ

Update: 2017-10-15 16:38 GMT

ವ್ಯಾಟಿಕನ್,ಅ.15: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಬ್ರೆಝಿಲ್, ಮೆಕ್ಸಿಕೊ, ಸ್ಪೇನ್ ಹಾಗೂ ಇಟಲಿ ದೇಶಗಳಿಗೆ ಸೇರಿದ 33 ಮಂದಿ ‘ಹುತಾತ್ಮರು’ ಸೇರಿದಂತೆ 35 ಮಂದಿಗೆ ಸಂತಪದವಿಯನ್ನು ಘೋಷಿಸಿದ್ದಾರೆ.

ರವಿವಾರ ವ್ಯಾಟಿಕನ್‌ನ ಸೈಂಟ್ ಪೀಟರ್ಸ್‌ ಚೌಕದಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಈ 35 ಮಂದಿಗೆ ಸಂತಪದವಿಯನ್ನು ಘೋಷಿಸಲಾಯಿತೆಂದು ವ್ಯಾಟಿಕನ್ ಮೂಲಗಳು ತಿಳಿಸಿವೆ.

  ಇಂದು ಸಂತಪದವಿ ಪಡೆದವರಲ್ಲಿ 1645ರಲ್ಲಿ ಬ್ರೆಝಿಲ್‌ನ ನತಾಲ್‌ನಲ್ಲಿ ಕೆಥೊಲಿಕ್ ವಿರೋಧಿ ಡಚ್ ಕ್ಯಾಲಿವಿನ್ ಪಂಥೀಯರಿಂದ ಹತ್ಯೆಯಾದ ಕ್ರೈಸ್ತ ಧರ್ಮಗುರುಗಳು ಹಾಗೂ ಸಾಮಾನ್ಯ ಕ್ರೈಸ್ತರು ಸೇರಿದ್ದಾರೆ. ವ್ಯಾಟಿಕನ್ ಪೀಠವು ಈ ಹತ್ಯಾಕಾಂಡಕ್ಕೆ ಬಲಿಯಾದವರನ್ನು ಹುತಾತ್ಮರೆಂದು ಪರಿಗಣಿಸಿದೆ.

 ಬ್ರೆಝಿಲ್‌ನ ಟ್ಲಾಕ್ಸ್‌ಕಾಲಾದ ‘ಬಾಲ ಹುತಾತ್ಮ’ರೆಂದು ಹೆಸರಾದ ಕ್ರಿಸ್ಟೋಬಾಲ್, ಆ್ಯಂಟೊನಿಯೊ ಹಾಗೂ ಜುವಾನ್ ಅವರಿಗೂ ಸಂತ ಪದವಿಯನ್ನು ಪೋಪ್ ಘೋಷಿಸಿದರು. 12ರಿಂದ 13 ವರ್ಷ ವಯಸ್ಸಿನ ಈ ಮೂವರು ಮಕ್ಕಳು ತಮ್ಮ ಬುಡಕಟ್ಟು ಧರ್ಮಕ್ಕೆ ಹಿಂದಿರುಗಲು ಒಪ್ಪದಿದ್ದುದಕ್ಕಾಗಿ 1527 ಹಾಗೂ 1529ರಲ್ಲಿ ಹತ್ಯೆಯಾಗಿದ್ದರು. ಸಂತ ಪದವಿಗೇರಿದವರಲ್ಲಿ ಯುರೋಪ್‌ನ ಇಬ್ಬರು ಕ್ರೈಸ್ತ ಧರ್ಮಗುರುಗಳೂ ಸೇರಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News