ಭೂಮಿಗೆ ಅಪ್ಪಳಿಸಲಿದೆ ಚೀನಾದ ಅಂತರಿಕ್ಷ ನಿಲಯ

Update: 2017-10-15 17:28 GMT

ಬೀಜಿಂಗ್, ಅ.15: ನಿಯಂತ್ರಣ ಕಳೆದುಕೊಂಡಿರುವ ಚೀನಾದ ಬಾಹ್ಯಾಕಾಶ ಪ್ರಯೋಗಾಲಯವೊಂದು, ಭೂಮಿಯತ್ತ ಧಾವಿಸಿಬರುತ್ತಿದೆಯೆಂದು ಚೀನಿ ವಿಜ್ಞಾನಿಗಳು ತಿಳಿಸಿದ್ದಾರೆ. 800 ಟನ್ ಭಾರವಿರುವ ಟಿಯೆನ್‌ಗಾಂಗ್ 1 ಬಾಹ್ಯಾಕಾಶ ಪ್ರಯೋಗಾಲಯವು 2011ರಲ್ಲಿ ಉಡಾವಣೆಗೊಳಿಸಲಾಗಿತ್ತು. ಟಿಯೆನ್‌ಗಾಂಗ್ ಈಗಾಗಲೇ ತನ್ನ ಪತನದ ಯಾತ್ರೆಯನ್ನು ಆರಂಭಿಸಿದೆಯೆಂದು ಅವರು ಹೇಳಿದ್ದಾರೆ. ಈ ತಿಂಗಳ ಅಂತ್ಯದಿಂದ ಹಿಡಿದು ಮುಂದಿನ ವರ್ಷದ ಎಪ್ರಿಲ್‌ನೊಳಗೆ ಅದು ಯಾವುದೇ ಸಮಯದಲ್ಲಿ ಭೂಮಿಯಲ್ಲಿ ಪತನಗೊಳ್ಳುವ ಸಾಧ್ಯತೆಯಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.

 ಟಿಯೆನ್‌ಗಾಂಗ್‌ನ ಬಹುತೇಕ ಭಾಗಗಳು ಅಂತರಿಕ್ಷದಲ್ಲೇ ಚದುರಿಹೋದರೂ, ಅದರ ಸುಮಾರು 100 ಕಿಲೋ ಭಾರವಿರುವ ಭಾಗಗಳು ಭೂಮಿಗೆ ಬಂದು ಬೀಳಲಿದೆ. ಭಾರೀ ವೇಗದೊಂದಿಗೆ ಅವುು ಭೂಮಿಗೆ ಅಪ್ಪಳಿಸಲಿದೆಯೆಂದು ಚೀನಾ ತಿಳಿಸಿದೆ. ಆದರೆ ಅವು ಭೂಮಿಯ ಯಾವ ಭಾಗದಲ್ಲಿ ಪತನಗೊಳ್ಳಲಿದೆಯೆಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News