ಜಪಾನ್‌ನಲ್ಲಿ ಮುಳುಗಿದ ಹಡಗು: 10 ಭಾರತೀಯರು ಕಣ್ಮರೆ

Update: 2017-10-16 04:08 GMT

ಟೋಕಿಯೊ, ಅ. 16: ಜಪಾನ್ ಕರಾವಳಿಯಲ್ಲಿ ಸರಕು ಸಾಗಾಣಿಕೆ ಹಡಗು ಮುಳುಗಿದ ಘಟನೆಯಲ್ಲಿ 10 ಮಂದಿ ಭಾರತೀಯರು ಇನ್ನೂ  ಕಣ್ಮರೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ರವೀಶ್ ಕುಮಾರ್ ಈ ಸಂಬಂಧ ಟ್ವೀಟ್ ಮಾಡಿ, "ಕಣ್ಮರೆಯಾದ ಕ್ಯಾಪ್ಟರ್ ನಯ್ಯರ್ ರಜನೀಶ್ ರಾಮಚಂದ್ರನ್, ಸೆಕೆಂಡ್ ಆಫೀಸರ್ ರಾಹುಲ್ ಕುಮಾರ್, ಮೂರನೆ ಅಧಿಕಾರಿ ಸುಬ್ರಹ್ಮಣ್ಯನ್ ಗಿರಿಧರ್ ಕುಮಾರ್, ಮುಖ್ಯ ಎಂಜಿನಿಯರ್ ರಜಪೂತ್ ಶ್ಯಾಮಸಿಂಗ್, ನಾಲ್ಕನೆ ಎಂಜಿನಿಯರ್ ಸುಬ್ಬಯ್ಯ ಸುರೇಶ್ ಕುಮಾರ್, ಕಿರಿಯ ಎಂಜಿನಿಯರ್ ಚೌಹಾಣ್ ಅಶೋಕ್ ಕುಮಾರ್, ಪೆರುಮಲಸಾಮಿ ಗುರುಮೂರ್ತಿ, ಮಲವರನನ್ ಸಿಲಂಬರಸನ್ ಮುರುಗನ್ ಗೌತಮ್ ಮತ್ತು ಬಿವಿನ್ ಥಾಮಸ್ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಹಾಂಕಾಂಗ್ ನೋಂದಣಿಯ ಸರಕು ಸಾಗಾಣಿಕೆ ಹಡಗು ಎಮೆರಾಲ್ಡ್ ಸ್ಟಾರ್, ಶನಿವಾರ ಮುಂಜಾನೆ ಇಶಿಗಕಿ ನಗರದ ದಕ್ಷಿಣದ ಸುಮಾರು 600 ಕಿಲೋಮೀಟರ್ ದೂರದಲ್ಲಿ ಈ ಹಡಗು ಮುಳುಗಿತ್ತು. 33,205 ಟನ್ ತೂಕ ಹೊಂದಿದ್ದ ಹಡಗು ಮುಂಜಾನೆ 2 ಗಂಟೆಯ ವೇಳೆಗೆ ಈ ಹಡಗಿನಿಂದ ತುರ್ತು ಕರೆ ಬಂದಿತ್ತು ಎಂದು ಜಪಾನ್‌ನ 11ನೆ ಪ್ರಾದೇಶಿಕ ಕರವಳಿ ಕಾವಲು ಪಡೆ ಹೇಳಿತ್ತು.

ತಕ್ಷಣ ಗಸ್ತು ನೌಕೆ ಹಾಗೂ ವಿಮಾನದ ಮೂಲಕ ಪರಿಹಾರ ಕಾರ್ಯಾಚರಣೆ ಕೈಗೊಂಡರೂ, ಬಿರುಗಾಳಿಯಿಂದಾಗಿ ಕಾರ್ಯಾಚರಣೆಗೆ ತಡೆ ಉಂಟಾಗಿತ್ತು ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News