ಫುಟ್ಬಾಲ್ ಪಂದ್ಯದಲ್ಲಿ ಸಹ ಆಟಗಾರನಿಗೆ ಢಿಕ್ಕಿ ಹೊಡೆದು ಗೋಲ್ ಕೀಪರ್ ಮೃತ್ಯು

Update: 2017-10-16 08:02 GMT

ಹೊಸದಿಲ್ಲಿ, ಅ.16: ಫುಟ್ಬಾಲ್ ಲೀಗ್ ಪಂದ್ಯಾಟದ ಸಂದರ್ಭ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಪರಿಣಾಮ ಇಂಡೋನೇಶ್ಯದ ಕ್ಲಬ್ ಪರ್ಸೆಲಾ ಲಮೋಂಗನ್ ನ ಆಟಗಾರ ಕಾಯಿರುಲ್ ಹುದಾ ಎಂಬವರು ಮೃತಪಟ್ಟಿದ್ದಾರೆ.

ಸೆಮೆನ್ ಪಡಂಗ್ ವಿರುದ್ಧದ ಪಂದ್ಯದಲ್ಲಿ ಎದುರಿನಿಂದ ಬರುತ್ತಿದ್ದ ಡಿಫೆಂಡರ್ ರ್ಯಾಮನ್ ರಾಡ್ರಿಗಸ್ ಅವರಿಗೆ ಕಾಯಿರುಲ್ ಹುದಾ ಢಿಕ್ಕಿ ಹೊಡೆದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.

ಆಘಾತಕಾರಿ ಘರ್ಷಣೆಯಿಂದಾಗಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಢಿಕ್ಕಿ ಹೊಡೆದ ಪರಿಣಾಮ ಎದೆ ಹಾಗು ಕೆಳ ದವಡೆಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿತ್ತು. 1999ರಿಂದ ಹುದಾ ಪರ್ಸೆಲಾ ತಂಡದಲ್ಲಿ ಆಡುತ್ತಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News