ಇನ್ನಿಂಗ್ಸ್ ಒಂದರಲ್ಲಿ 40 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದ ಕ್ರಿಕೆಟಿಗ

Update: 2017-10-16 10:34 GMT

ಹೊಸದಿಲ್ಲಿ, ಅ.16: ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ವೆಸ್ಟ್ ಅಗಸ್ಟಾ ತಂಡದ ಬ್ಯಾಟ್ಸ್ ಮೆನ್ ಒಬ್ಬರು 40 ಸಿಕ್ಸರ್ ಗಳನ್ನು ಸಿಡಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. 35 ಓವರ್ ನ ಈ ಪಂದ್ಯದಲ್ಲಿ ವೆಸ್ಟ್ ಅಗಸ್ಟಾ ತಂಡ 354 ರನ್ ಗಳಿಸಿದೆ. ಇದರಲ್ಲಿ 307 ರನ್ ಗಳು ನೂತನ ದಾಖಲೆ ನಿರ್ಮಿಸಿದ ಬ್ಯಾಟ್ಸ್ ಮೆನ್ ಜೋಶ್ ಡನ್ ಸ್ಟನ್ ಅವರದ್ದಾಗಿದೆ.

ಇನ್ನಿಂಗ್ಸ್ ವೊಂದರಲ್ಲಿ ತಂಡದ 86.72 ಸರಾಸರಿ ರನ್ ಗಳನ್ನು ಡನ್ ಸ್ಟನ್ ಗಳಿಸಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಸಿಡಿಸಿದ ದಾಖಲೆ ವಿವಿಯನ್ ರಿಚರ್ಡ್ಸ್ ಅವರ ಹೆಸರಲ್ಲಿದೆ. 1984ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಿಚರ್ಡ್ಸ್ 189 ರನ್ ಗಳಿಸಿದ್ದರು. ತಂಡದ ಒಟ್ಟು ಸ್ಕೋರ್ 272 ಆಗಿದ್ದು, ಇದರಲ್ಲಿ 69.48 ಸರಾಸರಿ ರನ್ ಗಳನ್ನು ರಿಚರ್ಡ್ಸ್ ಸಿಡಿಸಿದ್ದರು.

ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಡನ್ ಸ್ಟನ್ ಅವರ ತಂಡದ ಐವರು ಬ್ಯಾಟ್ಸ್ ಮೆನ್ ಗಳು ಯಾವುದೇ ಸ್ಕೋರ್ ಗಳಿಸದೆ ಔಟಾಗಿದ್ದರೆ, ಡನ್ ಸ್ಟನ್ ನಂತರದ ಅತೀ ಹೆಚ್ಚಿನ ಸ್ಕೋರ್ 18 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News