ಈಜಿಪುರ ಕಟ್ಟಡ ಕುಸಿತ ಕಾರಣಕ್ಕೆ ತನಿಖೆ: ರಾಮಲಿಂಗಾರೆಡ್ಡಿ
Update: 2017-10-16 18:46 IST
ಬೆಂಗಳೂರು, ಅ.16: ಈಜಿಪುರದಲ್ಲಿ ಮೂರ ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ ಸಂಬಂಧ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿರಲು ಸಾಧ್ಯವಿಲ್ಲ. ಬಹುಷಃ ಕಟ್ಟಡ ಹಳೆದಾಗಿರುವುದರಿಂದ ಕುಸಿದಿರಬಹುದು. ತನಿಖೆಯ ನಂತರ ಕಾರಣ ತಿಳಿದುಬರಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಈಜಿಪುರ ಕಟ್ಟಡ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಈ ಘಟನೆ ಗ್ಯಾಸ್ ಸಿಲಿಂಡರ್ ಸ್ಫೋಟನಿಂದ ಸಂಭವಿಸಿದೆ ಎಂದು ಕೆಲವರು ಹೇಳುತ್ತಾರೆ. ಬಾಡಿಗೆದಾರರು ಹಳೆಯ ಕಟ್ಟಡವಾಗಿರುವುದರಿಂದ ಕುಸಿದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆಯ ನಂತರ ನಿಖರ ಕಾರಣ ತಿಳಿದುಬರಲಿದೆ. ನಮ್ಮ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.