ಜಡೇಜ ಆಲ್‌ರೌಂಡ್ ಆಟ: ಸೌರಾಷ್ಟ್ರಕ್ಕೆ ಜಯ

Update: 2017-10-16 18:32 GMT

ರಾಜ್‌ಕೋಟ್, ಅ.16: ರವೀಂದ್ರ ಜಡೇಜ ದ್ವಿಶತಕ ಹಾಗೂ 7 ವಿಕೆಟ್‌ಗಳ ನೆರವಿನಿಂದ ಸೌರಾಷ್ಟ್ರ ತಂಡ ಜಮ್ಮು-ಕಾಶ್ಮೀರದ ವಿರುದ್ಧ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 212 ರನ್‌ಗಳಿಂದ ಜಯ ಸಾಧಿಸಿದೆ.

ಕಾಶ್ಮೀರ ತಂಡ 4 ವಿಕೆಟ್ ನಷ್ಟಕ್ಕೆ 103 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ್ದು 3ನೆ ದಿನವಾದ ಸೋಮವಾರ 16 ವಿಕೆಟ್‌ಗಳು ಪತನಗೊಂಡವು. 2ನೆ ದಿನದಾಟದಲ್ಲಿ ದ್ವಿಶತಕ ಬಾರಿಸಿದ್ದ ಜಡೇಜ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದರು. ಪ್ರವಾಸಿ ಕಾಶ್ಮೀರ ತಂಡ ಮೊದಲ ಇನಿಂಗ್ಸ್ ನಲ್ಲಿ 156 ರನ್‌ಗೆ ಆಲೌಟಾಯಿತು. ಫಾಲೋ-ಆನ್‌ಗೆ ಸಿಲುಕಿದ ಜಮ್ಮು-ಕಾಶ್ಮೀರ ತಂಡ 2ನೆ ಇನಿಂಗ್ಸ್ ನಲ್ಲಿ 256 ರನ್‌ಗೆ ಆಲೌಟಾಯಿತು.

ಮತ್ತೊಂದು ಪಂದ್ಯದಲ್ಲಿ ವಿದರ್ಭ ತಂಡ ಪಂಜಾಬ್ ವಿರುದ್ಧ ಇನಿಂಗ್ಸ್ ಹಾಗೂ 117 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News