ಎಸ್ ಬಿಐ ಗ್ರಾಹಕರಿಗೆ ಶುಭಸುದ್ದಿ: ವಿತ್ ಡ್ರಾ ಮಿತಿಯಲ್ಲಿ ಹೆಚ್ಚಳ

Update: 2017-10-20 07:07 GMT

ಹೊಸದಿಲ್ಲಿ, ಅ.20: ನಗದು ವಿತ್ ಡ್ರಾ ಹಾಗು ಆನ್ ಲೈನ್ ವ್ಯವಹಾರಗಳ ಮಿತಿಗೆ ಸಂಬಂಧಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಟಿಎಂ ಕಮ್ ಡೆಬಿಟ್ ಕಾರ್ಡ್ ಗಳಲ್ಲಿ ಹಲವು ಆಯ್ಕೆಗಳನ್ನು ನೀಡಿದೆ.

ಇನ್ನು ಮುಂದೆ ಎಸ್ ಬಿಐ ಗ್ರಾಹಕರು ದಿನವೊಂದಕ್ಕೆ 2 ಲಕ್ಷ ರೂ.ಗಳನ್ನು ವಿತ್ ಡ್ರಾ ಮಾಡಬಹುದಾಗಿದೆ ಹಾಗು 5 ಲಕ್ಷ ರೂ.ವರೆಗಿನ ಆನ್ ಲೈನ್ ಟ್ರಾನ್ಸಾಕ್ಷನ್ ಗಳನ್ನು ನಡೆಸಬಹುದಾಗಿದೆ. ಕಾರ್ಡ್ ಗಳಿಗೆ ಅನುಗುಣವಾಗಿ ಎಸ್ ಬಿಐ ಖಾತೆದಾರನ ಪ್ರತಿದಿನ ನಗದು ವಿತ್ ಡ್ರಾ ಮಿತಿ ಬದಲಾಗಲಿದೆ.

ಎಸ್ ಬಿಐ ಕ್ಲಾಸಿಕ್ ಡೆಬಿಟ್-ಕಮ್-ಎಟಿಎಂ ಕಾರ್ಡ್:

ಬ್ಯಾಂಕ್ ನೀಡುವ ಕಾರ್ಡ್ ಗಳಲ್ಲಿ ಜನಪ್ರಿಯವಾಗಿರುವ ಎಸ್ ಬಿಐ ಕ್ಲಾಸಿಕ್ ಡೆಬಿಟ್ ಕಾರ್ಡ್ ದಾರರು ದಿನವೊಂದಕ್ಕೆ 40 ಸಾವಿರ ರೂ.ವರೆಗೆ ವಿತ್ ಡ್ರಾ ಮಾಡಬಹುದಾಗಿದೆ. 50 ಸಾವಿರ ರೂ.ವರೆಗೆ ಆನ್ ಲೈನ್ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ.

ಎಸ್ ಬಿಐ ಪ್ರೈಡ್ ಮಾಸ್ಟರ್ ಡೆಬಿಟ್ ಕಮ್ ಎಟಿಎಂ ಕಾರ್ಡ್

ಈ ಕಾರ್ಡ್ ಹೊಂದಿರುವವರು ದಿನವೊಂದಕ್ಕೆ 1 ಲಕ್ಷ ರೂ. ವಿತ್ ಡ್ರಾ ಮಾಡಬಹುದಾಗಿದೆ. ಈ ಕಾರ್ಡ್ ನಲ್ಲಿ 2 ಲಕ್ಷ ರೂ.ಗಳವರೆಗೆ ಆನ್ ಲೈನ್ ಟ್ರಾನ್ಸಾಕ್ಷನ್ ಗಳನ್ನು ಮಾಡಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News