ಡೇಲ್ ಸ್ಟೇಯ್ನ್ ಮುಂದಿನ ತಿಂಗಳು ದೇಶಿಯ ಕ್ರಿಕೆಟ್ ಗೆ ವಾಪಸ್

Update: 2017-10-20 18:26 GMT

ಜೋಹಾನ್ಸ್‌ಬರ್ಗ್, ಅ.20: ಭುಜನೋವಿನಿಂದ ಚೇತರಿಸಿಕೊಳ್ಳುತ್ತಿರುವ ವೇಗದ ಬೌಲರ್ ಡೇಲ್ ಸ್ಟೇಯ್ನಿ ನವೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕದ ದೇಶಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮೂಲಕ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ.

 34ರ ಹರೆಯದ ಸ್ಟೇಯ್ನ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾಗ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಮಾಜಿ ವೇಗದ ಬೌಲರ್ ಹಾಗೂ ಕೋಚ್ ಒಟಿಸ್ ಗಿಬ್ಸನ್ ಅವರ ಮಾರ್ಗದರ್ಶನದಲ್ಲಿ ಸ್ಟೇಯ್ನಾ ತಂಡಕ್ಕೆ ವಾಪಸಾಗಲು ತಯಾರಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News