ಕೊಹ್ಲಿ ಶತಕ: ಭಾರತ 280/8

Update: 2017-10-22 11:53 GMT

ಮುಂಬೈ, ಅ.22: ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕದ ಸಹಾಯದಿಂದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮ(20) ಹಾಗೂ ಶಿಖರ್ ಧವನ್(9) ಉತ್ತಮ ಆರಂಭ ನೀಡಲು ವಿಫಲರಾದರು. 3.2ನೆ ಓವರ್‌ನಲ್ಲಿ ಧವನ್ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್(4-31) ಬೌಲಿಂಗ್‌ನಲ್ಲಿ ಔಟಾದರು.

ರೋಹಿತ್ ಶರ್ಮ ಹಾಗೂ ಕೇದಾರ್ ಜಾಧವ್(12) ಬೇಗನೆ ಔಟಾದರು. ಆಗ 4ನೆ ವಿಕೆಟ್‌ಗೆ ದಿನೇಶ್ ಕಾರ್ತಿಕ್(37)ರೊಂದಿಗೆ 73 ರನ್ ಜೊತೆಯಾಟ ನಡೆಸಿದ ಕೊಹ್ಲಿ ತಂಡದ ಇನಿಂಗ್ಸ್ ಹಳಿಗೆ ತಂದರು. ಕಾರ್ತಿಕ್ ಔಟಾದ ಬಳಿಕ ಮಾಜಿ ನಾಯಕ ಎಂಎಸ್ ಧೋನಿ(25) ಅವರೊಂದಿಗೆ 5ನೆ ವಿಕೆಟ್‌ಗೆ 57 ರನ್ ಸೇರಿಸಿದರು.

125 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 121 ರನ್ ಗಳಿಸಿದ ಕೊಹ್ಲಿ 49.2ನೆ ಓವರ್‌ನಲ್ಲಿ ಟಿಮ್ ಸೌಥಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಕಿವೀಸ್‌ನ ಪರ ವೇಗಿಗಳಾದ ಟ್ರೆಂಟ್ ಬೌಲ್ಟ್(4-35) ಹಾಗೂ ಟಿಮ್ ಸೌಥಿ(3-73) ಏಳು ವಿಕೆಟ್‌ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News