×
Ad

ಬರಹಗಾರ ವೆಂಕಟೇಶ್‌ಗೆ ‘ಅರವಿಂದ ಪ್ರಶಸ್ತಿ’

Update: 2017-10-22 17:37 IST

ಬೆಂಗಳೂರು, ಅ.22: ಕನ್ನಡ ಗೆಳೆಯರ ಬಳಗ ಕನ್ನಡಪರ ಹೋರಾಟಗಾರ ಅರವಿಂದರಾಯ ಜೋಶಿ ಅವರ ಹೆಸರಿನಲ್ಲಿ ಪ್ರದಾನಿಸುವ 2017ನೆ ಸಾಲಿನ ‘ಅರವಿಂದ ಪ್ರಶಸ್ತಿ’ಯನ್ನು ಹಿರಿಯ ಬರಹಗಾರ ಮಂ.ಅ.ವೆಂಕಟೇಶ್ ಅವರಿಗೆ ಘೋಷಿಸಲಾಗಿದೆ.

ಅದೇ ರೀತಿ, ಕನ್ನಡ ಹೋರಾಟಗಾರ ಆಳ್ವ ಚಿರಂಜೀವಿ ಅವರ ನೆನಪಿನಲ್ಲಿ ಪ್ರದಾನಿಸುವ ‘ಕನ್ನಡ ಚಿರಂಜೀವಿ’ ಪ್ರಶಸ್ತಿಗೆ ಕನ್ನಡ ಹೋರಾಟಗಾರ ರಫಾಯಲ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯನ್ನು ನ.7 ರಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಕಾರ್ಮಿಕಲೋಕದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಬಳಗದ ಸಂಚಾಲಕ ರಾಂ.ನಂ.ಚಂದ್ರಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News