ನಕಲಿ ವೈದ್ಯರ ತಡೆಗೆ ವಿಶೇಷ ಪಡೆ
ಬೆಂಗಳೂರು, ಅ.22: ಆರೋಗ್ಯ ಕ್ಷೇತ್ರಕ್ಕೆ ಕಂಟಕ ಪ್ರಾಯವಾಗಿರುವ ನಕಲಿ ವೈದ್ಯರ ಹಾವಳಿ ತಡೆಗೆ ಪೊಲೀಸರು, ವೈದ್ಯರು ಮತ್ತು ವಕೀಲರನ್ನು ಒಳಗೊಂಡ ಜಿಲ್ಲಾ ಮಟ್ಟದ ವಿಶೇಷ ಪಡೆಗಳನ್ನು ರಚಿಸಲಾಗಿದೆ.
ಪ್ರತೀ ಜಿಲ್ಲೆಯಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತೀ ಜಿಲ್ಲೆಯಲ್ಲಿ ವಿಶೇಷ ಪಡೆಗಳು ಕಾರ್ಯನಿರ್ವಹಿಸಲಿವೆ. ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ವಿಚಕ್ಷಣ ದಳದ ಅಧಿಕಾರಿಗಳು ಈಗಾಗಲೇ ನಕಲಿ ವೈದರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಡಿಜಿ-ಐಜಿಪಿ ಕಚೇರಿ ತಿಳಿಸಿದೆ.
ಆಯಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಪಡೆ ಕಾರ್ಯಾಚರಣೆಗೆ ಇಳಿಯಲಿದೆ. ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರ ಶೈಕ್ಷಣಿಕ ದಾಖಲೆಗಳು ಹಾಗೂ ವೃತ್ತಿಗೆ ಸಂಬಂಧಪಟ್ಟ ಸಂಸ್ಥೆಗಳಿಂದ ಪಡೆದುಕೊಂಡಿರುವ ಮಾನ್ಯತಾ ಪತ್ರಗಳನ್ನು ಪಡೆಯಲು ಸದಸ್ಯರು ಪರಿಶೀಲಿಸಲಿದ್ದಾರೆ.
ಈ ವೇಳೆ ಅಕ್ರಮವಾಗಿ ವೃತ್ತಿ ನಡೆಸುತ್ತಿದ್ದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಮ ಕೈಕ್ರಗೊಳ್ಳಲು ನಿರ್ಧರಿಸಲಾಗಿದೆ.