ವಿಜಯ್ 'ಮೆರ್ಸಲ್'ಗೆ ರಜಿನಿ ಬೆಂಬಲ

Update: 2017-10-23 10:44 GMT

ಚೆನ್ನೈ, ಅ.23: ಜಿಎಸ್ ಟಿ, ಡಿಜಿಟಲೀಕರಣಕ್ಕೆ ಸಂಬಂಧಿಸಿದ ಸಂಭಾಷಣೆಗಳಿಂದ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರುವ ತಮಿಳುನಟ ವಿಜಯ್ ಅವರ 'ಮೆರ್ಸಲ್‍' ಚಿತ್ರವನ್ನು ಸೂಪರ್ ಸ್ಟಾರ್ ರಜಿನಿಕಾಂತ್  ಬೆಂಬಲಿಸಿದ್ದಾರೆ.

ಟ್ವಿಟರ್ ಮೂಲಕ 'ಮೆರ್ಸಲ್‍' ಚಿತ್ರ ಹಾಗು ಚಿತ್ರತಂಡವನ್ನು ಅಭಿನಂದಿಸಿರುವ ಅವರು, ಅಗತ್ಯ ವಿಷಯವನ್ನು 'ಮೆರ್ಸಲ್' ಎತ್ತಿ ಹಿಡಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ಸಿನೆಮಾದ ವಿರುದ್ಧ ಬಿಜೆಪಿಯ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಚಿತ್ರದಲ್ಲಿರುವ ಕೆಲ ಸಂಭಾಷಣೆಗಳಿಗೆ ಕತ್ತರಿ ಹಾಕಬೇಕೆಂದು ಒತ್ತಾಯಿಸಿದ್ದ ನಂತರ 'ಮೆರ್ಸಲ್' ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

ನಟ ಕಮಲ್‍ಹಾಸನ್ ಕೂಡಾ ಸಿನೆಮಾವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಜಿಎಸ್‍ಟಿ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳನ್ನು ಟೀಕಿಸಿದ್ದ ದೃಶ್ಯಗಳನ್ನು ಸಿನೆಮಾದಿಂದ ತೆಗೆಯಬೇಕೆಂದು ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಡಾ. ತಮಿಳ್ ಇಸೈ ಸೌಂದರರಾಜನ್ ಆಗ್ರಹಿಸಿದ್ದರು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News