ಸತತ 2ನೆ ಬಾರಿ ‘ಫಿಫಾ ವರ್ಷದ ಆಟಗಾರ’ ಪ್ರಶಸ್ತಿ ಗೆದ್ದ ರೊನಾಲ್ಡೊ

Update: 2017-10-24 08:13 GMT

ಹೊಸದಿಲ್ಲಿ, ಅ.24: ರಿಯಲ್ ಮ್ಯಾಡ್ರಿಡ್ ನ ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೊನಾಲ್ಡೊ ಸತತ 2ನೆ ಬಾರಿಗೆ ಫಿಫಾ ವರ್ಷದ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಐದು ಬಾರಿ ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಪಾತ್ರರಾಗಿರುವ ಬಾರ್ಸೆಲೋನಾದ ಲಿಯೋನಲ್ ಮೆಸ್ಸಿ ದ್ವಿತೀಯ ಹಾಗು ಪ್ಯಾರಿಸ್ ಸೈಂಟ್-ಜರ್ಮನ್ ನ ನೇಮರ್ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

2008, 2013, 2014, 2016 ಹಾಗು 2017ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿಯನ್ನು ರೊನಾಲ್ಡೊ ಗೆದ್ದಿದ್ದರೆ, 2009, 2010, 2011, 2012 ಹಾಗು 2015ರಲ್ಲಿ ಮೆಸ್ಸಿ ಈ ಪ್ರಶಸ್ತಿ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News