×
Ad

ಮಹಿಳೆಯ ಕೊಲೆ ಪ್ರಕರಣ: ಗುಂಡು ಹಾರಿಸಿ ಆರೋಪಿ ಸೆರೆ

Update: 2017-10-24 19:50 IST

ಬೆಂಗಳೂರು, ಅ.24: ನಗರದ ಹೊರವಲಯದ ಕನಕಪುರ ತಾಲೂಕಿನ ಸಾತನೂರಲ್ಲಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಗುಂಡೇಟಿನಿಂದ ಕಾಲಿಗೆ ಗಾಯಗೊಂಡಿರುವ ಬೋರೇಗೌಡನದೊಡ್ಡಿಯ ಚಂದ್ರ(20) ಕನಕಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರೋಪಿ ಚಂದ್ರು ಚಾಕುನಿಂದ ನಡೆಸಿದ ಹಲ್ಲೆಯಿಂದ ಕೈಗೆ ಗಾಯಗೊಂಡಿರುವ ಕನಕಪುರ ನಗರ ಠಾಣೆ ಪೊಲೀಸ್ ಸಬ್‌ ಇನ್ ಸ್ಪೆಪೆಕ್ಟರ್ ಅನಂತರಾಮ್ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ತಿಂಗಳು ಸೋರೇಕಾಯಿದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಚಂದ್ರನನ್ನು ನಿನ್ನೆ ಮಧ್ಯರಾತ್ರಿಯ ವೇಳೆ ಬೋರೇಗೌಡನದೊಡ್ಡಿ ಬಳಿ ಅಡಗಿರುವ ಖಚಿತ ಮಾಹಿತಿ ಆಧರಿಸಿ ಸರ್ಕಲ್ ಇನ್ ಸ್ಪೆಪೆಕ್ಟರ್ ಮಲ್ಲೇಶ್ ನೇತೃತ್ವದ ಸಬ್ ಇನ್ ಸ್ಪೆಪೆಕ್ಟರ್ ಅನಂತರಾಮ್ ಅವರಿದ್ದ ತಂಡ ಬಂಧನಕ್ಕೆ ಮುಂದಾದಾಗ, ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News